×
Ad

ವಿವಿಐಪಿ ಸೌಲಭ್ಯವಿಲ್ಲ, ಭದ್ರತೆಯಿಲ್ಲ; ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವ ಪ್ರಧಾನ ಮಂತ್ರಿ !

Update: 2020-06-21 23:44 IST

ರಸ್ತೆ ಬದಿ ದೇಶದ ಪ್ರಧಾನ ಮಂತ್ರಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು ಮತ್ತು ಅವರನ್ನು ಪತ್ರಕರ್ತರೊಬ್ಬರು ರಸ್ತೆ ಮಧ್ಯದಲ್ಲೇ ಮಾತನಾಡಿಸುವುದು ಎಲ್ಲಾದರೂ ಕೇಳಿದ್ದೀರಾ?... ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಐಸ್ ಲ್ಯಾಂಡ್ ಪ್ರಧಾನಮಂತ್ರಿಯ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಐಸ್ ಲ್ಯಾಂಡ್ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್ ಡಾಟಿರ್ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ಈ ಸಂದರ್ಭ ಸಿಎನ್ ಎನ್ ಪತ್ರಕರ್ತ ಮ್ಯಾಕ್ಸ್ ಫಾಸ್ಟರ್ ಅವರನ್ನು ಮಾತನಾಡಿಸುತ್ತಾರೆ.

“ಪ್ರಧಾನ ಮಂತ್ರಿಯವರೇ, ಜನರು ಐಸ್ ಲ್ಯಾಂಡ್ ಗೆ ಯಾಕೆ ಭೇಟಿ ನೀಡಬೇಕು” ಎಂದು ಮ್ಯಾಕ್ಸ್ ಫಾಸ್ಟರ್ ಪ್ರಶ್ನಿಸುತ್ತಾರೆ. ಈ ಸಂದರ್ಭ ಪ್ರಧಾನಿ ಕ್ಯಾಟ್ರಿನ್, “ಐಸ್ ಲ್ಯಾಂಡ್ ವಾಸಿಸಲು ಮತ್ತು ಭೇಟಿ ನೀಡಲು ಅತ್ಯುತ್ತಮ ಪ್ರದೇಶ. ಐಸ್ ಲ್ಯಾಂಡ್ ಗೆ ಜನರು ಭೇಟಿ ನೀಡಲು ಅತಿ ಮುಖ್ಯ ಕಾರಣವೆಂದರೆ ಇಲ್ಲಿನ ಪ್ರಕೃತಿ” ಎಂದು ಹೇಳುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News