ಶಾಲೆಗಳು ತೆರೆಯದಿದ್ದರೆ ಅನುದಾನ ಕಡಿತ: ಟ್ರಂಪ್ ಎಚ್ಚರಿಕೆ

Update: 2020-07-09 18:11 GMT

ವಾಶಿಂಗ್ಟನ್, ಜು. 9: ಶಾಲೆಗಳು ‘ಫಾಲ್’ (ಸೆಪ್ಟಂಬರ್ನಿಂದ ಡಿಸೆಂಬರ್ವರೆಗಿನ ಅವಧಿ) ಋತುವಿನಲ್ಲಿ ತೆರೆಯದಿದ್ದರೆ ಅವುಗಳಿಗೆ ನೀಡಲಾಗುವ ಅನುದಾನವನ್ನು ಕಡಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ ಹಾಗೂ ಶಾಲೆಗಳ ಪುನರಾರಂಭಕ್ಕೆ ಫೆಡರಲ್ ಆರೋಗ್ಯ ಸಂಸ್ಥೆಯೊಂದು ವಿಧಿಸಿರುವ ಮಾರ್ಗದರ್ಶಿ ಸೂತ್ರಗಳು ‘ಅತ್ಯಂತ ಕಠಿಣ ಮತ್ತು ದುಬಾರಿಯಾಗಿವೆ’ ಎಂದು ಬಣ್ಣಿಸಿದ್ದಾರೆ.

‘‘ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮೊದಲು ಅಮೆರಿಕದ ಶಾಲೆಗಳು ತೆರೆದರೆ ತಮಗೆ ಕೆಟ್ಟದು ಎಂಬುದಾಗಿ ಡೆಮಾಕ್ರಟಿಕರು ಭಾವಿಸುತ್ತಾರೆ. ಆದರೆ, ಶಾಲೆಗಳು ತೆರೆಯುವುದು ಮಕ್ಕಳು ಮತ್ತು ಕುಟುಂಬಗಳ ಹಿತಾಸಕ್ತಿಗೆ ಪೂರಕವಾಗಿದೆ. ಶಾಲೆಗಳು ತೆರೆಯದಿದ್ದರೆ ಅವುಗಳಿಗೆ ನೀಡುತ್ತಿರುವ ನೆರವನ್ನು ಕಡಿತಮಾಡಬೇಕಾಗಬಹುದು’’ ಎಂದು ಟ್ರಂಪ್ ಟ್ವಿಟರ್ ನಲ್ಲಿ ಬರೆದಿದ್ದಾರೆ. ಕೆಲವು ಯುರೋಪಿಯನ್ ಶಾಲೆಗಳು ಯಾವುದೇ ಸಮಸ್ಯೆಯಿಲ್ಲದೆ ತೆರೆದಿವೆ ಎನ್ನುವುದರತ್ತ ಅವರು ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News