ಚೀನಾ: ಭಾರೀ ಮಳೆ, ಭೂಕುಸಿತ: 14 ಸಾವು

Update: 2020-07-09 18:13 GMT

ಬೀಜಿಂಗ್, ಜು. 9: ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಅದರಿಂದಾಗಿ ಸಂಭವಿಸಿದ ಭೂಕುಸಿತಳಿಂದಾಗಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ.

ಗಿಯುಝೂ ಪ್ರಾಂತದ ಮೂರು ಗ್ರಾಮಗಳಲ್ಲಿ ಬುಧವಾರ ಸಂಭವಿಸಿದ ಭೂಕುಸಿತದ ಬಳಿಕ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದ ಹಲವಾರು ಮನೆಗಳು ಮಣ್ಣಿನ ರಾಶಿಯಲ್ಲಿ ಹೂತುಹೋಗಿವೆ.

ಈ ಗ್ರಾಮಗಳ ಕನಿಷ್ಠ 156 ಮಂದಿಯನ್ನು ಸ್ಥಳಾಂತರಿಸಲಾಗಿದೆ ಹಾಗೂ ಮಣ್ಣಿನಡಿಯಲ್ಲಿ ಸಿಕ್ಕಿಹಾಕಿಕೊಂಡ ಆರು ಮಂದಿಯನ್ನು ರಕ್ಷಿಸಲಾಗಿದೆ. ಸುಮಾರು 19 ಮನೆಗಳು ಹೂತುಹೋಗಿವೆ ಹಾಗೂ ಇತರ 60 ಮನೆಗಳಿಗೆ ಆಂಶಿಕ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News