ಉತ್ತರ ಕೊರಿಯ ಪರಮಾಣು ಶಸ್ತ್ರ ಅಭಿವೃದ್ಧಿಪಡಿಸಿರಬಹುದು: ವಿಶ್ವಸಂಸ್ಥೆ ವರದಿ

Update: 2020-08-04 18:24 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಆ. 4: ಉತ್ತರ ಕೊರಿಯವು ತನ್ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಮುಂದುವರಿಸುತ್ತಿದೆ ಹಾಗೂ ಬಹುಶಃ ಅದು ತನ್ನ ಕ್ಷಿಪಣಿಗಳ ಸಿಡಿತಲೆಗಳಿಗೆ ಹೊಂದಿಕೊಳ್ಳುವಂಥ ಕಿರು ಗಾತ್ರದ ಪರಮಾಣು ಸಾಧನಗಳನ್ನು ಅಭಿವೃದ್ಧಿಪಡಿಸಿದೆ ಎಂಬುದಾಗಿ ಹಲವು ದೇಶಗಳು ಭಾವಿಸಿವೆ ಎಂದು ವಿಶ್ವಸಂಸ್ಥೆಯ ಗೌಪ್ಯ ವರದಿಯೊಂದು ತಿಳಿಸಿದೆ.

ಉತ್ತರ ಕೊರಿಯವು ಕೊನೆಯದಾಗಿ ನಡೆಸಿದ ಆರು ಪರಮಾಣು ಪರೀಕ್ಷೆಗಳು ಕಿರುಗಾತ್ರದ ಪರಮಾಣು ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಆ ದೇಶಕ್ಕೆ ನೆರವು ನೀಡಿರುವ ಸಾಧ್ಯತೆಯಿದೆ ಎಂಬುದಾಗಿ ಈ ದೇಶಗಳು ಭಾವಿಸಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಪರಿಣತರ ಸಮಿತಿಯ ವರದಿ ಹೇಳಿದೆ.

ಉತ್ತರ ಕೊರಿಯವು 2017 ಸೆಪ್ಟಂಬರ್ ಬಳಿಕ ಯಾವುದೇ ಪರಮಾಣು ಪರೀಕ್ಷೆಯನ್ನು ನಡೆಸಿಲ್ಲ.

ಈ ಮಧ್ಯಂತರ ವರದಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉತ್ತರ ಕೊರಿಯ ದಿಗ್ಬಂಧನ ಸಮಿತಿಗೆ ಸೋಮವಾರ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News