ಮಹಿಳೆಯ ಕಾರಿನೊಳಗಿದ್ದ 3 ಅಡಿ ಹೆಬ್ಬಾವನ್ನು ರಕ್ಷಿಸಿದ ಪೊಲೀಸರು

Update: 2020-08-06 07:59 GMT

ಹೊಸದಿಲ್ಲಿ,ಆ.6: ಕಾರಿನ ಟಯರ್‌ನೊಳಗೆ ಅವಿತುಕೊಂಡಿದ್ದ ಹೆಬ್ಬಾವನ್ನು ನೋಡಿ ಗಾಬರಿಗೊಂಡ ಮಹಿಳೆಯೊಬ್ಬರು ಸಹಾಯಕ್ಕಾಗಿ ನ್ಯೂ ಮೆಕ್ಸಿಕೊದ ಪೊಲೀಸರ ಮೊರೆ ಹೋಗಿದ್ದರು. ಮಹಿಳೆಯ ಕರೆಗೆ ಸ್ಪಂದಿಸಿದ ಪೊಲೀಸರು ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

 ರೋಸ್‌ವೆಲ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರಿನಲ್ಲಿ ಮೂರು ಅಡಿ ಉದ್ದದ ಹೆಬ್ಬಾವನ್ನು ಪತ್ತೆ ಹೆಚ್ಚಿದರು. ಅದು ಎಂಜಿನ್ ಮೂಲಕ ಕಾರಿನ  ಟಯರ್‌ನೊಳಗೆ‌ ಪ್ರವೇಶಿಸಿರುವುದು ಕಂಡು ಬಂದಿದೆ. ಹಾವನ್ನು ಸ್ಥಳೀಯ ಪ್ರಾಣಿ ಸೇವೆಗಳಿಗೆ ಹಸ್ತಾಂತರಿಸಲಾಗಿದೆ.

ಹಾವಿನ ರಕ್ಷಣೆಯ ವಿವರ ಹಾಗೂ ಚಿತ್ರಗಳನ್ನು ಪೊಲೀಸ್ ಇಲಾಖೆಯು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News