ಹಿರೋಶಿಮ ಪರಮಾಣು ದಾಳಿಗೆ 75 ವರ್ಷ

Update: 2020-08-06 18:00 GMT

 ಟೋಕಿಯೊ(ಜಪಾನ್), ಆ. 6: ಜಗತ್ತಿನ ಮೊದಲ ಪರಮಾಣು ದಾಳಿಗೆ ಗುರುವಾರ 75 ವರ್ಷಗಳು ತುಂಬಿದೆ. 1945 ಆಗಸ್ಟ್ 6ರಂದು ದ್ವಿತೀಯ ಜಾಗತಿಕ ಸಮರ ಜಾರಿಯಲ್ಲಿದ್ದಾಗ ಅಮೆರಿಕದ ಬಿ-29 ಯುದ್ಧ ವಿಮಾನವೊಂದು ‘ಲಿಟಲ್ ಬಾಯ್’ ಎಂಬ ಹೆಸರಿನ ಪರಮಾಣು ಬಾಂಬನ್ನು ಜಪಾನ್‌ನ ಹಿರೋಶಿಮ ನಗರದ ಮೇಲೆ ಹಾಕಿತು.

ಕೊರೋನ ವೈರಸ್ ಸಾಂಕ್ರಾಮಿಕದ ಬೆದರಿಕೆಯ ಹಿನ್ನೆಲೆಯಲ್ಲಿ, ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಯಿತು.

75 ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ಸುಮಾರು 1,40,000 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡರು. ಆ ಪೈಕಿ ಹಲವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದವರು ವಾರಗಳಲ್ಲಿ ಹಾಗೂ ತಿಂಗಳುಗಳಲ್ಲಿ ಕೊನೆಯುಸಿರೆಳೆದರು.

ಇದಾದ ಮೂರು ದಿನಗಳ ಬಳಿಕ, ಅಂದರೆ ಆಗಸ್ಟ್ 9ರಂದು ಜಪಾನ್‌ನ ಇನ್ನೊಂದು ನಗರ ನಾಗಸಾಕಿ ಮೇಲೆ ಅಮೆರಿಕ ಪರಮಾಣು ದಾಳಿ ನಡೆಸಿತು. ಆ ದಾಳಿಯಲ್ಲಿ 74,000 ಮಂದಿ ಮೃತಪಟ್ಟರು.

ಇದಾದ ಕೆಲವೇ ದಿನಗಳ ಬಳಿಕ, ಅಂದರೆ ಆಗಸ್ಟ್ 15ರಂದು ಯುದ್ಧದಲ್ಲಿ ತನ್ನ ಶರಣಾಗತಿಯನ್ನು ಜಪಾನ್ ಘೋಷಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News