ಚೀನಾ: 27 ವರ್ಷ ಜೈಲು ಬಳಿಕ ಕೊಲೆ ಆರೋಪದಿಂದ ಮುಕ್ತಿ!

Update: 2020-08-06 18:22 GMT

ಬೀಜಿಂಗ್, ಆ. 6: ಕೊಲೆ ಪ್ರಕರಣವೊಂದರಲ್ಲಿ 27 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ, ಚೀನಾದ ನ್ಯಾಯಾಲಯವೊಂದು ವ್ಯಕ್ತಿಯೊಬ್ಬರ ವಿರುದ್ಧದ ಕೊಲೆ ಆರೋಪದಿಂದ ದೋಷಮುಕ್ತಗೊಳಿಸಿದೆ. ಈ ಘಟನೆಯು ಚೀನಾದ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸರ ಚಿತ್ರಹಿಂಸೆಯ ಬಗ್ಗೆ ಬೆಳಕು ಚೆಲ್ಲಿದೆ.

ಇಬ್ಬರು ಬಾಲಕರನ್ನು ಕೊಂದ ಆರೋಪದಲ್ಲಿ 52 ವರ್ಷದ ಝಾಂಗ್ ಯುಹುವಾನ್ ಎಂಬವರನ್ನು 1993ರಲ್ಲಿ ಜೈಲಿಗೆ ಹಾಕಲಾಗಿತ್ತು. ಆದರೆ ನನಗೆ ಪೊಲೀಸರು ಚಿತ್ರಹಿಂಸೆ ನೀಡಿ ಅಪರಾಧವನ್ನು ಒಪ್ಪಿಕೊಳ್ಳುವಂತೆ ಬಲವಂತಪಡಿಸಿದ್ದರು ಎಂದು ಅವರು ಹೇಳುತ್ತಲೇ ಬಂದಿದ್ದರು.

‘‘ಪುರಾವೆಗಳನ್ನು ಮರುಪರಿಶೀಲಿಸಿದ ಬಳಿಕ, ಝಾಂಗ್ ಕೊಲೆ ಮಾಡಿರುವುದನ್ನು ಸಾಬೀತುಪಡಿಸುವ ನೇರ ಪುರಾವೆಗಳು ನಮಗೆ ಸಿಕ್ಕಿಲ್ಲ. ಹಾಗಾಗಿ ಅವರನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಲಾಗಿದೆ’’ ಎಂದು ಜಿಯಾಂಗ್‌ಕ್ಸಿ ಹೈ ಪೀಪಲ್ಸ್ ಕೋರ್ಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News