ಭಾರತ-ಚೀನಾ ಬಿಕ್ಕಟ್ಟು ಪರಿಹರಿಸಲು ಮಧ್ಯಸ್ಥಿಕೆಯ ಕೊಡುಗೆ ನೀಡಿದ ಟ್ರಂಪ್

Update: 2020-09-05 17:48 GMT

ವಾಶಿಂಗ್ಟನ್,ಸೆ.5: ಭಾರತ-ಚೀನಾದ ಗಡಿಯುದ್ದಕ್ಕೂ ಪರಿಸ್ಥಿತಿ ‘‘ತೀರಾ ಅಸಹನೀಯವಾಗಿದೆ’’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದು, ಉಭಯದೇಶಗಳ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವುದಕ್ಕೆ ಸಹಾಯಮಾಡಲು ಅಮೆರಿಕ ಸಿದ್ಧವಿದೆಯೆಂದು ಹೇಳಿದ್ದಾರೆ.

ಶ್ವೇತಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಭಾರತ ಹಾಗೂ ಚೀನಾದ ನಡುವೆ ತಲೆದೋರಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಉಭಯ ದೇಶಗಳ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಪುನರುಚ್ಚರಿಸಿದರು. ಚೀನಾ ಹಾಗೂ ಭಾರತಕ್ಕೆ ನೆರವಾಗಲು ನಾವು ಸಿದ್ಧವಾಗಿ ನಿಂತಿದ್ದೇವೆ ಎಂದೂ ಟ್ರಂಪ್ ತಿಳಿಸಿದರು.

 ಚೀನಾವು ಭಾರತವನ್ನು ಬೆದರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಹಾಗಾಗಬಾರದೆಂದು ತಾನು ಆಶಿಸುವುದಾಗಿ ಹೇಳಿದರು. ಆದರೆ ಚೀನಾವು ಖಂಡಿತವಾಗಿಯೂ ಆ ನಿಟ್ಟಿನಲ್ಲಿ ಸಾಗುತ್ತಿದೆ. ಬಹಳಷ್ಟು ಮಂದಿ ತಿಳಿದುಕೊಂಡಿರುವುದುಕ್ಕಿಂತಲೂ ಅಧಿಕವಾಗಿ ಅವರು (ಚೀನಿಯರು) ಹೆಚ್ಚು ಬಲಪ್ರದರ್ಶಿಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News