ಅಕ್ಟೋಬರ್ 4ರಿಂದ ಹಂತಹಂತವಾಗಿ ಉಮ್ರಾ ಯಾತ್ರೆಗೆ ಅನುಮತಿಸಲಿರುವ ಸೌದಿ ಆಡಳಿತ

Update: 2020-09-23 07:29 GMT

ಜಿದ್ದಾ : ಈ ವರ್ಷದ ಅಕ್ಟೋಬರ್ 4ರಿಂದ  ಉಮ್ರಾ  ಯಾತ್ರೆಗೆ ಹಾಗೂ ಎರಡು ಪವಿತ್ರ ಮಸೀದಿಗಳಿಗೆ ಸೀಮಿತ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಅನುಮತಿಯನ್ನು ಹಂತ ಹಂತವಾಗಿ ನೀಡುವುದಾಗಿ ಸೌದಿ ಅರೇಬಿಯಾ ತಿಳಿಸಿದೆ. 

ಉಮ್ರಾ ಯಾತ್ರೆ ಕೈಗೊಳ್ಳಲು ಸ್ವದೇಶದ ಹಾಗೂ ವಿದೇಶದ ಜನರಿಗಿರುವ ಆಸಕ್ತಿ ಹಾಗೂ  ಭೇಟಿ ನೀಡುವವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಕೋವಿಡ್ ಸಂಬಂಧಿತ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ ಅನುಮತಿ ನೀಡಲು ಅಲ್ಲಿನ ಆಡಳಿತ ನಿರ್ಧರಿಸಿದೆ ಎಂದು ಆಂತರಿಕ ಸಚಿವಾಲಯದ ಮೂಲಗಳು ನೀಡಿದ ಮಾಹಿತಿಯನ್ನಾಧರಿಸಿ ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಉಮ್ರಾ ಯಾತ್ರೆಗೆ ಆರಂಭಿಕವಾಗಿ ಸೌದಿ ಅರೇಬಿಯಾದ ನಾಗರಿಕರಿಗೆ ಅನುಮತಿಸಲಾಗುವುದು. ಸಾಮಾನ್ಯವಾಗಿ ಅನುಮತಿಸಲಾಗುವ ಯಾತ್ರಾರ್ಥಿಗಳ ಸಂಖ್ಯೆಯ ಶೇ 30ರಷ್ಟು ಮಂದಿಗೆ, ಅಂದರೆ 6,000 ಮಂದಿಗೆ ಈ ಬಾರಿ ಅನುಮತಿ ದೊರೆಯಲಿದೆ. ಎರಡನೇ ಹಂತದಲ್ಲಿ ದೇಶದ ನಾಗರಿಕರ ಹೊರತಾಗಿ ದೇಶದಲ್ಲಿರುವ ವಲಸಿಗರಿಗೆ ಅನುಮತಿ ನೀಡಲಾಗುವುದು. ಈ ಅನುಮತಿ ಅ. 18ರಿಂದ ದೊರೆಯುವುದು ಅಂದರೆ ಸಾಮಾನ್ಯವಾಗಿ ಅನುಮತಿಸಲಾಗುವ ಯಾತ್ರಾರ್ಥಿಗಳ ಸಂಖ್ಯೆಯ ಶೇ 75ರಷ್ಟು ಅಂದರೆ  ಸುಮಾರು 15,000 ಮಂದಿಗೆ ಅನುಮತಿ ದೊರೆಯಲಿದೆ.

ಮೂರನೇ ಹಂತದಲ್ಲಿ ವಿದೇಶಗಳಲ್ಲಿರುವ ಯಾತ್ರಾರ್ಥಿಗಳಿಗೆ  ನ. 1ರಿಂದ ಅನುಮತಿ ದೊರೆಯಲಿದ್ದು ಪ್ರತಿ ದಿನ ಪೂರ್ಣ ಪ್ರಮಾಣದಲ್ಲಿ ಅಂದರೆ ಪೂರ್ಣ ಸಾಮರ್ಥ್ಯವಾದ 20,000 ಮಂದಿ ಹಾಗೂ ದಿನವೊಂದಕ್ಕೆ 60,000 ಯಾತ್ರಾರ್ಥಿಗಳಿಗೆ ಅನುಮತಿ ದೊರೆಯಲಿದೆ ಹಾಗೂ ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕ ಇದೇ ವ್ಯವಸ್ಥೆ ಮುಂದುವರಿಯಲಿದೆ.

ನಾಲ್ಕನೇ ಹಂತದಲ್ಲಿ ದೇಶದ ಹಾಗೂ ವಿದೇಶಗಳ ಜನರಿಗೆ  ಶೇ 100 ಸಾಮರ್ಥ್ಯದಂತೆ  ಉಮ್ರಾ ಯಾತ್ರೆಗೆ ಹಾಗೂ ಎರಡು ಪವಿತ್ರ ಮಸೀದಿಗಳಿಗೆ ಅನುಮತಿ ನೀಡಲಾಗುವುದು ಆದರೆ ಕೋವಿಡ್ ಸಾಂಕ್ರಾಮಿಕ ಸಂಪೂರ್ಣ ದೂರ ಸರಿದ ನಂತರ ಈ ಅನುಮತಿ ದೊರೆಯಲಿದೆ.

ತರುವಾಯ ಯಾತ್ರಾರ್ಥಿಗಳ ಪ್ರವೇಶ ಕುರಿತಾದ ವಿಚಾರಗಳನ್ನು ನೋಡಿಕೊಳ್ಳಲು ಎಟಮರ್ನ ಎಂಬ ಆ್ಯಪ್ ಅನ್ನು ಹಜ್ ಮತ್ತು ಉಮ್ರಾ ಸಚಿವಾಲಯ ಬಿಡುಗಡೆಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News