ಈ ದೇಶದಲ್ಲಿ ಮತ್ತೆ ಉಲ್ಬಣಿಸಿದ ಕೊರೋನ: ಎರಡನೇ ಬಾರಿಗೆ ಆರೋಗ್ಯ ತುರ್ತುಸ್ಥಿತಿ ಘೋಷಣೆ

Update: 2020-10-26 18:29 GMT

ಮ್ಯಾಡ್ರಿಡ್,ಅ.26: ಯುರೋಪ್ ರಾಷ್ಟ್ರವಾದ ಮ್ಯಾಡ್ರಿಡ್‌ನಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಎರಡನೇ ಬಾರಿಗೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

 ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಚೆಝ್ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಜನರು ರಾತ್ರಿ ಸಮಯ ಸಂಚರಿಸುವಂತಿಲ್ಲ ಹಾಗೂ 6ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

 ‘ನಾವು ಅತ್ಯಂತ ತೀವ್ರತೆಯ ಪರಿಸ್ಥಿತಿಯಲ್ಲಿದ್ದೇವೆ. ಇದೊಂದು ಶತಮಾನದ ಅತ್ಯಂತ ಗಂಭೀರವಾದ ಆರೋಗ್ಯ ಬಿಕ್ಕಟ್ಟಾಗಿದೆ ’’ಎಂದವರು ಹೇಳಿದ್ದಾರೆ.

ಕಳೆದ ಜನವರಿಯಿಂದ ಸ್ಪೇನ್‌ನಲ್ಲಿ ಕೋವಿಡ್-19 ಹಾವಳಿಯು ತಾಂಡವವಾಡುತ್ತಿದೆ. ಜೂನ್ ಬಳಿಕ ಇಳಿಮುಖಗೊಂಡಿದ್ದರೂ, ಅಕ್ಟೋಬರ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವುದು ಸರಕಾರವನ್ನು ಕಳವಳಕ್ಕೀಡು ಮಾಡಿದೆ.

  ಸ್ಪೇನ್‌ನಲ್ಲಿ ಈವರೆಗೆ 10.46 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದ್ದು, 34752 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News