ತಾಯಿಯ ಅಕೌಂಟ್ ಬಳಸಿ 11 ಲಕ್ಷ ರೂ.ಯನ್ನು ಆ್ಯಪಲ್ ಸ್ಟೋರ್ ಗೆ ಪಾವತಿಸಿದ ಆರರ ಹರೆಯದ ಬಾಲಕ

Update: 2020-12-14 13:27 GMT

ವಿಲ್ಟನ್,ಡಿ.14: ತಮ್ಮ ಬ್ಯಾಂಕ್ ಅಕೌಂಟ್ ನಿಂದ ಬರೋಬ್ಬರಿ 16,000 ಡಾಲರ್ (11 ಲಕ್ಷ ರೂ.) ಮೊತ್ತವು ಕಾಣೆಯಾಗಿರುವುದನ್ನು ಕಂಡ ಆ್ಯಪಲ್ ಬಳಕೆದಾರರಾಗಿದ್ದ 41ರ ಹರೆಯದ ಜೆಸಿಕಾ ಜಾನ್ಸನ್ ಒಮ್ಮೆಲೇ ಬೆಚ್ಚಿಬಿದ್ದರು. ಅವರೇನೂ ಕ್ರೆಡಿಟ್, ಡೆಬಿಟ್ ಕಾರ್ಡುಗಳ ವಂಚನೆಗೆ ಒಳಗಾಗಿರಲಿಲ್ಲ. ಅವರ ಅಕೌಂಟನ್ನು ಯಾರೂ ಹ್ಯಾಕ್ ಮಾಡಿಯೂ ಇರಲಿಲ್ಲ. ಪರಿಶೀಲನೆ ಮಾಡಿ ನೋಡಿದಾಗ ತಮ್ಮ 6ರ ಹರೆಯದ ಮಗನೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದು ಬಂತು.

ತಾಯಿಯ ಐಪ್ಯಾಡ್ ಅನ್ನು ಬಳಸಿಕೊಂಡು ಆ್ಯಪಲ್ ಸ್ಟೋರ್ ನಿಂದ ಹಲವು ಗೇಮ್ ಗಳನ್ನು ಹಾಗೂ ಆ್ಯಪ್ ಗಳನ್ನು ಪುಟ್ಟ ಬಾಲಕ ಖರೀದಿಸಿದ್ದ. ಜುಲೈ 8ರಿಂದ ಸುಮಾರು 25 ಬಾರಿ ಜೆಸಿಕಾ ಅಕೌಂಟ್ ನಿಂದ ಹಣ ಹಿಂದೆಗೆದುಕೊಳ್ಳಲಾಗುತ್ತಿತ್ತು. ಇದ್ಯಾರೋ ಹ್ಯಾಕರ್ ಗಳ ಕೆಲಸವಾಗಿರಬಹುದೆಂದು ಜೆಸಿಕಾ ಭಾವಿಸಿ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ, ಇದು ವಂಚಕರ ಕೆಲಸವೇನಲ್ಲ ನಿಮ್ಮ ಅಕೌಂಟ್ ನಿಂದಲೇ ಹಣವನ್ನು ತೆಗೆಯಲಾಗಿದೆ ಎಂದು ತಿಳಿದು ಬಂತು.

ತಮ್ಮ ಆರು ವರ್ಷದ ಪೋರನ ಕೃತ್ಯವಿದು ಎಂದು ತಿಳಿಯಲು ಹೆಚ್ಚು ಸಮಯವೇನೂ ಬೇಕಾಗಿರಲಿಲ್ಲ. ಹೇಗೂ ಹಣ ಅಕೌಂಟ್ ನಿಂದ ಖಾಲಿಯಾಗಿದೆ. ಹೇಗಾದರೂ ಮರಳಿ ಪಡೆಯೋಣ ಅಂದುಕೊಂಡು ಆ್ಯಪಲ್ ಸ್ಟೋರ್ ಗೆ ತೆರಳಿದಾಗ, “ನೀವು 60 ದಿನಗಳ ಒಳಗಡೆ ನಮ್ಮನ್ನು ಸಂಪರ್ಕಿಸಬೇಕಿತ್ತು. ಈಗ ಸಮಯ ಮೀರಿದೆ. ಹಾಗಾಗಿ ನಿಮ್ಮ ಹಣವನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ಆ್ಯಪಲ್ ಕಂಪೆನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News