ಪಾಕಿಸ್ತಾನದಲ್ಲಿ ದೇವಾಲಯ ಧ್ವಂಸ ಪ್ರಕರಣ: 8 ಪೊಲೀಸರ ಅಮಾನತು, 100ಕ್ಕೂ ಹೆಚ್ಚು ಜನರ ಬಂಧನ

Update: 2021-01-03 17:41 GMT
photo/AFP

ಲಾಹೋರ್‌,ಜ.03: ಪಾಕಿಸ್ತಾನದ ಖೈಬರ್‌ ಪ್ರಾಂತ್ಯದಲ್ಲಿರುವ ತೆರಿ ಎಂಬ ಗ್ರಾಮದಲ್ಲಿ ಕೆಲ ದುಷ್ಕರ್ಮಿಗಳು ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದ ದೇವಾಲಯವನ್ನು ಧ್ವಂಸ ಮಾಡಿದ್ದರು. ಬಳಿಕ ಈ ಕುರಿತು ಮಾತನಾಡಿದ್ದ ಅಲ್ಲಿನ ರಾಜ್ಯ ಸರಕಾರ, ಹಿಂದೂ ಸಮುದಾಯದವರ ನೇತೃತ್ವದಲ್ಲೇ ದೇವಾಯಲಯವನ್ನು ಮರಳಿ ನಿರ್ಮಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದುindianexpress.com  ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ರವಿವಾರ 45 ಆರೋಪಿಗಳನ್ನು ಬಂಧಿಸಲಾಗಿದೆ ಎಂದು indianexpress.com  ವರದಿ ಮಾಡಿದೆ. ಹಿಂದೂ ಸಮುದಾಯದ ಪ್ರಮುಖ ಗುರುವೋರ್ವರ ಸಮಾಧಿ ಸ್ಥಳವನ್ನು ಸಂಘಟನೆಯೊಂದರ ಕಾರ್ಯಕರ್ತರು ಧ್ವಂಸಗೈದಿದ್ದರು. ಸದ್ಯ ಬಂಧಿತರಿಗೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. 

ಪ್ರಕರಣದಲ್ಲಿ ಜಮೀಯತ್‌ ಉಲಮಾ ಇ ಇಸ್ಲಾಂ ಸಂಘಟನೆಯ ಪ್ರಮುಖ ಮುಖಂಡರನ್ನೂ ಬಂಧಿಸಲಾಗಿದೆ. 350ಕ್ಕೂ ಹೆಚ್ಚು ಆರೋಪಿಗಳ ಹೆಸರು ಎಫ್‌ಐಆರ್‌ ನಲ್ಲಿ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News