×
Ad

ನೈಜರ್: ಗ್ರಾಮಸ್ಥರ ಮೇಲೆ ದಾಳಿ; ಕನಿಷ್ಠ 70 ಸಾವು

Update: 2021-01-03 23:38 IST

ನ್ಯಾಮೆ (ನೈಜರ್), ಜ. 3: ಪಶ್ಚಿಮ ಆಫ್ರಿಕದ ದೇಶ ನೈಜರ್‌ನ ಗಡಿ ಪ್ರದೇಶಗಳಲ್ಲಿ ಗ್ರಾಮಸ್ಥರ ಮೇಲೆ ನಡೆದ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 70ನ್ನು ದಾಟಿದೆ ಎಂದು ದೇಶದ ಆಂತರಿಕ ಸಚಿವ ಅಲ್ಕಾಚೆ ಅಲ್ಹಾದ ರವಿವಾರ ತಿಳಿಸಿದ್ದಾರೆ.

ಮಾಲಿ ದೇಶದ ಜೊತೆಗಿನ ಗಡಿಯ ಸಮೀಪವಿರುವ ಎರಡು ಗ್ರಾಮಗಳಲ್ಲಿ ಶನಿವಾರ ದಾಳಿ ನಡೆದಿದೆ. ದಾಳಿಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ.

 ಈ ಹಿಂದೆ ಗ್ರಾಮಸ್ಥರು ಇಬ್ಬರು ಬಂಡುಕೋರರನ್ನು ಕೊಂದಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.

ನೈಜರ್‌ನಲ್ಲಿ ನಡೆದ ಮೊದಲ ಸುತ್ತಿನ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನವೇ ಹಿಂಸಾಚಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News