ಟೆಕ್ಸಾಸ್ ಚರ್ಚ್‌ನಲ್ಲಿ ಗುಂಡು ಹಾರಾಟ; ಓರ್ವ ಸಾವು

Update: 2021-01-04 18:15 GMT

ವಾಶಿಂಗ್ಟನ್, ಜ. 4: ಅಮೆರಿಕದ ಟೆಕ್ಸಾಸ್ ರಾಜ್ಯದ ಚರ್ಚೊಂದರಲ್ಲಿ ರವಿವಾರ ನಡೆದ ಗುಂಡು ಹಾರಾಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿನೋನ ಪಟ್ಟಣದ ಚರ್ಚೊಂದರಲ್ಲಿ ಗುಂಡು ಹಾರಾಟ ನಡೆದಿದ್ದು, ಓರ್ವ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಟೆಕ್ಸಾಸ್ ರಾಜ್ಯದ ಗವರ್ನರ್ ಗ್ರೆಗ್ ಅಬಾಟ್ ಹೇಳಿದ್ದಾರೆ.

ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಅಡಗಿರುವುದನ್ನು ನೋಡಿದಾಗ ಚರ್ಚ್‌ನ ಪಾಸ್ಟರ್ ತನ್ನ ಪಿಸ್ತೂಲನ್ನು ಹೊರದೆಗೆದರು. ಆದರೆ, ವ್ಯಕ್ತಿಯು ಪಾಸ್ಟರ್‌ನತ್ತ ನೆಗೆದು ಪಿಸ್ತೂಲನ್ನು ಸೆಳೆದು ಅವರ ಮೇಲೆ ಗುಂಡು ಹಾರಿಸಿ ಕೊಂದನು ಎಂದು ಕೆಎಲ್‌ಟಿವಿ ವರದಿ ಮಾಡಿದೆ.

ಬಳಿಕ ಪೊಲೀಸರು ಹಂತಕನನ್ನು ಬೆನ್ನಟ್ಟಿ ಗುಂಡು ಹಾರಿಸಿ ಗಾಯಗೊಳಿಸಿ ಹಿಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News