20 ಶೇ. ಸಾಂದ್ರತೆಯ ಯುರೇನಿಯಂ ಸಂವರ್ಧನೆ ಪುನರಾರಂಭ: ಇರಾನ್ ಘೋಷಣೆ

Update: 2021-01-04 18:17 GMT

ಟೆಹರಾನ್ (ಇರಾನ್), ಜ. 4: ಇರಾನ್ ತನ್ನ ಭೂಗತ ಫೋರ್ಡೌ ಪರಮಾಣು ಸ್ಥಾವರದಲ್ಲಿ 20 ಶೇಕಡ ಸಾಂದ್ರತೆಯ ಯುರೇನಿಯಮ್‌ನ ಸಂವರ್ಧನೆಯನ್ನು ಪುನರಾರಂಭಿಸಿದೆ ಎಂದು ಇರಾನ್ ಸರಕಾರದ ವಕ್ತಾರ ಅಲಿ ರಬಿಐ ಅಧಿಕೃತ ಸುದ್ದಿ ಸಂಸ್ಥೆ ಮೆಹರ್‌ಗೆ ಸೋಮವಾರ ತಿಳಿಸಿದ್ದಾರೆ.

2015ರಲ್ಲಿ ಇರಾನ್ ಮತ್ತು ಜಗತ್ತಿನ ಆರು ಪ್ರಬಲ ದೇಶಗಳ ನಡುವೆ ಏರ್ಪಟ್ಟ ಪರಮಾಣು ಒಪ್ಪಂದದ ಪ್ರಕಾರ, ಇಷ್ಟು ಸಾಂದ್ರತೆಯ ಯುರೇನಿಯಮನ್ನು ಇರಾನ್ ಹೊಂದುವಂತಿಲ್ಲ.

2018ರಲ್ಲಿ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದು ಇರಾನ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಆರಂಭಿಸಿದಂದಿನಿಂದ, ಇರಾನ್ ಒಂದೊಂದಾಗಿ ಒಪ್ಪಂದದ ಅಂಶಗಳನ್ನು ಉಲ್ಲಂಘಿಸುತ್ತಾ ಬಂದಿದೆ.

‘‘ಕೆಲವು ನಿಮಿಷಗಳ ಹಿಂದೆ, ಫೋರ್ಡೌ ಪರಮಾಣು ಸ್ಥಾವರದಲ್ಲಿ 20 ಶೇಕಡ ಸಾಂದ್ರತೆಯ ಯುರೇನಿಯಂ ಉತ್ಪಾದನೆ ಪ್ರಕ್ರಿಯೆ ಆರಂಭಗೊಂಡಿದೆ’’ ಎಂದು ರಬಿಐ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News