ಆರೋಪ ನಿರಾಕರಿಸಿದ ಇರಾನ್

Update: 2021-01-05 17:27 GMT

ಮುಟ್ಟುಗೋಲು ಹಾಕಲಾಗಿರುವ ತನ್ನ 7 ಬಿಲಿಯ ಡಾಲರ್ ಹಣವನ್ನು ಬಿಡುಗಡೆಗೊಳಿಸುವಂತೆ ದಕ್ಷಿಣ ಕೊರಿಯದ ಮೇಲೆ ಒತ್ತಡ ಹೇರುವುದಕ್ಕಾಗಿ ಆ ದೇಶದ ಹಡಗು ಮತ್ತು ಅದರ ಸಿಬ್ಬಂದಿಯನ್ನು ತಾನು ಒತ್ತೆಯಾಳುಗಳಾಗಿ ಬಳಸುತ್ತಿದ್ದೇನೆ ಎಂಬ ಆರೋಪವನ್ನು ಇರಾನ್ ಮಂಗಳವಾರ ನಿರಾಕರಿಸಿದೆ.

‘‘ಇಂಥ ಆರೋಪಗಳಿಗೆ ನಾವು ಒಗ್ಗಿಕೊಂಡಿದ್ದೇವೆ’’ ಎಂದು ಇರಾನ್ ಸರಕಾರದ ವಕ್ತಾರ ಅಲೀ ರಾಬಿಈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘‘ಆದರೆ, ಯಾರಾದರೂ ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದರೆ, ಅದು ದಕ್ಷಿಣ ಕೊರಿಯ. ನಮ್ಮ 7 ಬಿಲಿಯ ಡಾಲರ್ ಹಣವನ್ನು ಅದು ನಿರಾಧಾರ ಕಾರಣಗಳಿಗಾಗಿ ಒತ್ತೆಯಿರಿಸಿಕೊಂಡಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News