×
Ad

‘ಲಸಿಕೆಗಳು ದ. ಆಫ್ರಿಕದಲ್ಲಿ ಕೊರೋನ ಪ್ರಭೇದ ವಿರುದ್ಧ ಕೆಲಸ ಮಾಡವು’

Update: 2021-01-08 23:16 IST

ಲಂಡನ್, ಜ. 8: ದಕ್ಷಿಣ ಆಪ್ರಿಕದಲ್ಲಿ ಪತ್ತೆಯಾಗಿರುವ ನೂತನ ಕೊರೋನ ವೈರಸ್ ಪ್ರಭೇದದ ವಿರುದ್ಧ ಈಗ ಲಭ್ಯವಿರುವ ಕೋವಿಡ್-19 ಲಸಿಕೆಗಳು ಪರಿಣಾಮಕಾರಿಯಾಗಲಾರವು ಎಂದು ಬ್ರಿಟನ್ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶ್ಯಾಪ್ಸ್ ಎಲ್‌ಬಿಸಿ ರೇಡಿಯೊಗೆ ತಿಳಿಸಿದ್ದಾರೆ.

‘‘ಕೊರೋನ ವೈರಸ್‌ನ ದಕ್ಷಿಣ ಆಫ್ರಿಕ ಪ್ರಭೇದವು ಪರಿಣತರ ಚಿಂತೆಗೆ ಕಾರಣವಾಗಿದೆ. ಯಾಕೆಂದರೆ ಈಗ ಲಭ್ಯವಿರುವ ಲಸಿಕೆಗಳು ಅದರ ವಿರುದ್ಧ ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡಲಾರವು’’ ಎಂದು ಅವರು ಹೇಳಿದರು.

‘‘ದಕ್ಷಿಣ ಆಫ್ರಿಕ ಪ್ರಭೇದವು ವಿಜ್ಞಾನಿಗಳ ಭಾರೀ ಕಳವಳಕ್ಕೆ ಕಾರಣವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News