ದಾಂಧಲೆಯ ವೇಳೆ ಪೈಪ್ ಬಾಂಬ್: ಮಾಹಿತಿಗಾಗಿ ಬಹುಮಾನ ಘೋಷಣೆ
Update: 2021-01-08 23:24 IST
ವಾಶಿಂಗ್ಟನ್, ಜ. 8: ಅಮೆರಿಕದ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರಮುಖ ಸಮಿತಿಗಳ ಪ್ರಧಾನ ಕಚೇರಿಗಳಲ್ಲಿ ಪೈಪ್ ಬಾಂಬ್‌ಗಳನ್ನು ಇರಿಸಿದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 50,000 ಡಾಲರ್ (ಸುಮಾರು 36.62 ಲಕ್ಷ ರೂಪಾಯಿ) ಬಹುಮಾನ ನೀಡುವುದಾಗಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಘೋಷಿಸಿದೆ.
ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಿತಿ ಮತ್ತು ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಗಳ ಪ್ರಧಾನ ಕಚೇರಿಗಳಲ್ಲಿ ಶಂಕಿತ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಬುಧವಾರ ವರದಿಯಾಗಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಸಾವಿರಾರು ಬೆಂಬಲಿಗರು ದೇಶದ ಸಂಸತ್ ಕಟ್ಟಡದ ಮೇಲೆ ದಾಳಿ ನಡೆಸಿದ ದಿನವೇ ಈ ಶಂಕಿತ ಬಾಂಬ್‌ಗಳನ್ನು ಇರಿಸಲಾಗಿತ್ತು. ದಾಂಧಲೆಯ ವೇಳೆ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ.