ಸ್ಯಾನ್ ಡೀಗೊ ‘ಝೂ’ನಲ್ಲಿ 8 ಗೊರಿಲ್ಲಾಗಳಿಗೆ ಕೊರೋನ ವೈರಸ್ ಸೋಂಕು

Update: 2021-01-12 17:47 GMT

ಲಾಸ್ ಏಂಜಲಿಸ್ (ಅಮೆರಿಕ), ಜ. 12: ಅಮೆರಿಕದ ಸ್ಯಾನ್ ಡೀಗೊ ಪ್ರಾಣಿಸಂಗ್ರಹಾಲಯದ ಸಫಾರಿ ಪಾರ್ಕ್‌ನಲ್ಲಿರುವ 8 ಗೊರಿಲ್ಲಾಗಳು ಕೋವಿಡ್-19 ಸೋಂಕಿಗೆ ಒಳಗಾಗಿವೆ. ಗೊರಿಲ್ಲಾಗಳನ್ನು ನೋಡಿಕೊಳ್ಳುವ ವ್ಯಕ್ತಿಯಿಂದ ಅವುಗಳಿಗೆ ಈ ಸಾಂಕ್ರಾಮಿಕ ಕಾಯಿಲೆ ಹರಡಿದೆ ಎನ್ನಲಾಗಿದೆ.

ಮಾನವರಿಂದ ವಾನರಗಳಿಗೆ ಕೊರೋನ ವೈರಸ್ ಹರಡಿದ ಮೊದಲ ಬಲ್ಲ ಪ್ರಕರಣ ಇದಾಗಿದೆ.

ಅತ್ಯಂತ ಅಪಾಯದ ಅಂಚಿನಲ್ಲಿರುವ ‘ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾ’ಗಳ ಪೈಕಿ ಮೂರು ಗೊರಿಲ್ಲಾಗಳು ಕೆಮ್ಮುವುದು ಸೇರಿದಂತೆ ಕೋವಿಡ್-19 ಲಕ್ಷಣಗಳನ್ನು ತೋರಿಸಿವೆ. ಆದರೆ, ಯಾವುದೇ ಗೊರಿಲ್ಲಾಗಳು ಗಂಭೀರ ಕಾಯಿಲೆಗೆ ಒಳಗಾಗಿಲ್ಲ ಹಾಗೂ ಅವುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಈವರೆಗೆ ಒಂದು ಗೊರಿಲ್ಲಾವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ಕೋವಿಡ್-19 ಹೊಂದಿರುವುದು ದೃಢಪಟ್ಟಿದೆ. ಹಾಗಾಗಿ, ಉಳಿದ 7 ಗೊರಿಲ್ಲಾಗಳೂ ಕಾಯಿಲೆಗೆ ಒಳಗಾಗಿರಬೇಕೆಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News