ಖತರ್‌ಗೆ ವಾಯುಪ್ರದೇಶ ಮರುತೆರೆದ ಈಜಿಪ್ಟ್

Update: 2021-01-12 17:58 GMT

 ಕೈರೋ (ಈಜಿಪ್ಟ್), ಜ. 12: ಈಜಿಪ್ಟ್ ಮಂಗಳವಾರ ಖತರ್ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮರುತೆರೆದಿದೆ ಹಾಗೂ ಉಭಯ ದೇಶಗಳ ನಡುವಿನ ವಿಮಾನ ಯಾನವನ್ನು ಪುನರಾರಂಭಿಸಲು ಒಪ್ಪಿಕೊಂಡಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.

ಖತರ್ ಏರ್‌ವೇಸ್‌ನ ವಿಮಾನವೊಂದು ಶುಕ್ರವಾರ ಕೈರೋದಲ್ಲಿ ಇಳಿಯಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಎರಡು ದೇಶಗಳ ನಡುವೆ ಸರಕು ಸಾಗಣೆಗೂ ಒಪ್ಪಂದ ನಡೆದಿದೆ ಎಂದು ಸರಕಾರಿ ಪತ್ರಿಕೆ ‘ಅಲ್-ಅಹ್ರಮ್’ ವರದಿ ಮಾಡಿದೆ.

ಈಜಿಪ್ಟ್ ಮತ್ತು ಅದರ ಕೊಲ್ಲಿ ಮಿತ್ರ ದೇಶಗಳಾದ ಸೌದಿ ಅರೇಬಿಯ, ಬಹರೈನ್ ಮತ್ತು ಯುಎಇ 2017 ಜೂನ್‌ನಲ್ಲಿ ಖತರ್ ವಿರುದ್ಧ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ್ದವು. ಆ ಮೂಲಕ ಖತರ್ ಜೊತೆಗಿನ ಎಲ್ಲ ಸಂಪರ್ಕಗಳನ್ನು ಕಡಿದುಕೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News