ಸೂ ಕಿಯ ಆಸ್ಟ್ರೇಲಿಯನ್ ಸಲಹೆಗಾರನೂ ಬಂಧನದಲ್ಲಿ

Update: 2021-02-06 18:25 GMT

ಯಾಂಗನ್ (ಮ್ಯಾನ್ಮಾರ್), ಫೆ. 6: ಮ್ಯಾನ್ಮಾರ್‌ನಲ್ಲಿ ಈ ವಾರ ಸೇನೆ ನಡೆಸಿದ ಕ್ಷಿಪ್ರಕ್ರಾಂತಿಯ ಬಳಿಕ ನನ್ನನ್ನು ಬಂಧನದಲ್ಲಿಡಲಾಗಿದೆ ಎಂದು ದೇಶದ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿಯ ಆರ್ಥಿಕ ಸಲಹೆಗಾರನಾಗಿರುವ ಆಸ್ಟ್ರೇಲಿಯ ಪ್ರಜೆ ಸಿಯಾನ್ ಟರ್ನೆಲ್ ಶನಿವಾರ ಬಿಬಿಸಿಗೆ ಹೇಳಿದ್ದಾರೆ.

ಮ್ಯಾನ್ಮಾರ್‌ನ ನೂತನ ಸೇನಾ ಸರಕಾರದಿಂದ ಬಂಧನಕ್ಕೊಳಗಾಗಿರುವುದು ಖಚಿತಗೊಂಡ ಮೊದಲ ವಿದೇಶೀಯ ಅವರಾಗಿದ್ದಾರೆ.

ಸೂ ಕಿ ಸೇರಿದಂತೆ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಹಲವು ಹಿರಿಯ ರಾಜಕಾರಣಿಗಳನ್ನು ಸೇನೆ ಬಂಧನದಲ್ಲಿಟ್ಟಿದೆ.

‘‘ಈ ಕ್ಷಣದವರೆಗೆ ನಾನು ಬಂಧನದಲ್ಲಿದ್ದೇನೆ. ಬಹುಶಃ ನನ್ನ ವಿರುದ್ಧ ಯಾವುದೋ ಆರೋಪವನ್ನು ಹೊರಿಸಲಾಗಿದೆ. ಯಾವ ಆರೋಪ ಎನ್ನುವುದು ನನಗೆ ಗೊತ್ತಿಲ್ಲ’’ ಎಂದು ಮ್ಯಾಕ್ವಾರಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿರುವ ಸಿಯಾನ್ ಟರ್ನೆಲ್ ಬಿಬಿಸಿಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News