ಸಂಪ್ರದಾಯ ಮುರಿದ ಪೋಪ್ : ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಹುದ್ದೆಗೆ ಮಹಿಳೆಯ ನೇಮಕ
Update: 2021-02-07 23:16 IST
ವ್ಯಾಟಿಕನ್ಸಿಟಿ, ಫೆ.7: ಬಿಷಪ್ಗಳ ಸಮಾವೇಶದ ಅಧೀನ ಕಾರ್ಯದರ್ಶಿಯಾಗಿ ಮಹಿಳೆಯೊಬ್ಬರನ್ನು ನೇಮಿಸುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಶತಮಾನಗಳ ಕ್ರೈಸ್ತ ಪರಂಪರೆಯಲ್ಲಿ ಹೊಸ ಬದಲಾವಣೆ ತಂದಿದ್ದಾರೆ. ಕ್ರೈಸ್ತ ಧರ್ಮದ ಸಿದ್ಧಾಂತ, ಬೋಧನೆಗಳ ಕುರಿತಾದ ಪ್ರಮುಖ ಪ್ರಶ್ನೆಗಳನ್ನು ಅಧ್ಯಯನ ಮಾಡುವ ಈ ಘಟಕದಲ್ಲಿ ಮಹಿಳೆಯೊಬ್ಬರಿಗೆ ಮತದಾನದ ಹಕ್ಕಿನೊಂದಿಗೆ ಹುದ್ದೆಯನ್ನು ನೀಡಿರುವುದು ಇದೇ ಮೊದಲ ಸಲವಾಗಿದೆ.ಬಿಷಪ್‌ಗಳ ಸಿನೋಡ್ (ಸಮಾವೇಶ)ಗೆ ಶನಿವಾರ ನೇಮಕಗೊಂಡ ಇಬ್ಬರು ನೂತನ ಅಧೀನ ಕಾರ್ಯದರ್ಶಿಗಳ ಪೈಕಿ ಫ್ರೆಂಚ್ ಮೂಲದ ಮಹಿಳೆ ನಥಾಲಿ ಬೆಕಾರ್ಟ್ ಕೂಡಾ ಒಬ್ಬರು. ಚರ್ಚ್‌ನ ವಿವೇಚನಾತ್ಮಕ ಹಾಗೂ ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರು ವಿಶಾಲವಾದ ಪಾತ್ರ ವಹಿಸಬೇಕೆಂಬ ಪೋಪ್ ಅವರ ಆಶಯವನ್ನು ಈ ನೇಮಕವು ಸಂಕೇತಿಸುತ್ತದೆ ಎಂದು ಕಾರ್ಡಿನಲ್ ಸಿನೊಡ್‌ನ ಮಹಾಕಾರ್ಯದರ್ಶಿ ಕಾರ್ಡಿನಲ್ ಮಾರಿಯೊ ಗ್ರೆಚ್ ತಿಳಿಸಿದ್ದಾರೆ.