ಹಾಂಕಾಂಗ್: ಹೊಸ ವಲಸೆ ಕಾನೂನಿಗೆ ವಕೀಲರ ವಿರೋಧ

Update: 2021-02-13 18:28 GMT

ಹಾಂಕಾಂಗ್, ಫೆ. 13: ಹಾಂಕಾಂಗ್‌ನಿಂದ ಹೊರಹೋಗುವ ಯಾರನ್ನೇ ಆದರೂ ತಡೆಯುವ ಅಪರಿಮಿತ ಅಧಿಕಾರವನ್ನು ವಲಸೆ ನಿರ್ದೇಶಕರಿಗೆ ನೀಡುವ ಹಾಂಕಾಂಗ್ ಸರಕಾರದ ಪ್ರಸ್ತಾಪವು ಅತ್ಯಂತ ಕಳವಳಕಾರಿ ಎಂದು ಹಾಂಕಾಂಗ್ ವಕೀಲರು ಶುಕ್ರವಾರ ಹೇಳಿದ್ದಾರೆ.

 ಈ ಹೊಸ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಹಾಂಕಾಂಗ್ ವಕೀಲರ ಸಂಘವು ಹಾಂಕಾಂಗ್ ಲೆಜಿಸ್ಲೇಟಿವ್ ಕೌನ್ಸಿಲ್‌ಗೆ ಶುಕ್ರವಾರ ಮನವಿಯೊಂದನ್ನು ಸಲ್ಲಿಸಿದೆ. ಹಾಂಕಾಂಗ್ ನಿವಾಸಿಯಾಗಿರಲಿ, ಅಲ್ಲದಿರಲಿ ನಗರದಿಂದ ಹೊರಹೋಗಲು ವಿಮಾನ ಹತ್ತುವ ಯಾರನ್ನೇ ಆದರೂ ತಡೆಯುವ ಅಧಿಕಾರವನ್ನು ಕಾನೂನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News