ಡಬ್ಲುಎಚ್‌ಓ ಕೋವಿಡ್-19ವರದಿಗೆ ಅಮೆರಿಕ ಕಳವಳ

Update: 2021-02-14 17:30 GMT

  ವಾಶಿಂಗ್ಟನ್,ಅ.14: ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಆರಂಭಿಕ ದಿನಗಳ ಕುರಿತ ನಿಖರ ದತ್ತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆಯ ನಿಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕೆಂದು ಅಮೆರಿಕವು ಶನಿವಾರ ಚೀನಿ ಸರಕಾರಕ್ಕೆ ಕರೆ ನೀಡಿದೆ. ಚೀನಾದಲ್ಲಿ ಕೋವಿಡ್-19 ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಂಗ್ರಹಿಸಿದ ವರದಿಯ ಬಗ್ಗೆಯೂ ಅದು ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ.

 ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಸ್ವತಂತ್ರವಾಗಿರಬೇಕು ಹಾಗೂ ಚೀನಿ ಸರಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

  ಅಮೆರಿಕದ ಹೇಳಿಕೆಗೆ ವಾಶಿಂಗ್ಟನ್‌ನಲ್ಲಿ ಚೀನಾ ರಾಯಭಾರಿ ಕಚೇರಿಯು ಕಟುವಾಗಿ ಪ್ರತಿಕ್ರಿಯಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಅಮೆರಿಕವು ಬಹುರಾಷ್ಟ್ರೀಯ ಸಹಕಾರಕ್ಕೆ ಹಾನಿಯುಂಟು ಮಾಡಿದೆ ಮತ್ತು ಅದು ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ನೀಡಿದ ಚೀನಾ ಮತ್ತಿತರ ರಾಷ್ಟ್ರಗಳತ್ತ ಬೆರಳು ತೋರಿಸಬಾರದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News