×
Ad

“ವುಹಾನ್ ನಲ್ಲಿ ಕೊರೋನವು ನಾವು ಭಾವಿಸಿರುವುದಕ್ಕಿಂತಲೂ ತೀವ್ರವಾಗಿತ್ತು”

Update: 2021-02-15 23:36 IST

ವಾಶಿಂಗ್ಟನ್, ಫೆ. 15: ಚೀನಾದ ವುಹಾನ್ ನಗರದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟದ ತೀವ್ರತೆ ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚು ತೀವ್ರವಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರ ತಂಡವು ಪತ್ತೆಹಚ್ಚಿದೆ ಎಂದು ಸಿಎನ್‌ಎನ್ ಸುದ್ದಿವಾಹಿನಿ ವರದಿ ಮಾಡಿದೆ.

 ನಗರದ ಸಾವಿರಾರು ರಕ್ತದ ಮಾದರಿಗಳನ್ನು ಅಧ್ಯಯನಕ್ಕಾಗಿ ತುರ್ತಾಗಿ ಒದಗಿಸುವಂತೆ ಪರಿಣತರು ಚೀನಾವನ್ನು ಒತ್ತಾಯಿಸಿದ್ದಾರೆ. ಆದರೆ, ಚೀನಾ ಈವರೆಗೆ ಅದನ್ನು ಪೂರೈಸಿಲ್ಲ.

2019ರ ಡಿಸೆಂಬರ್‌ನಲ್ಲಿ ಈಗ ಭಾವಿಸಿರುವುದಕ್ಕಿಂತಲೂ ಹೆಚ್ಚಿನ ತೀವ್ರತೆಯ ಸಾಂಕ್ರಾಮಿಕ ಸ್ಫೋಟವಾಗಿರುವುದಕ್ಕೆ ಸಂಬಂಧಿಸಿದ ಹಲವು ಸೂಚನೆಗಳನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಂಡದ ಪ್ರಧಾನ ತನಿಖಾಧಿಕಾರಿ ಪೀಟರ್ ಬೆನ್ ಎಂಬರೆಕ್ ಸಿಎನ್‌ಎನ್‌ಗೆ ನೀಡಿದ ವಿಸ್ತೃತ ಸಂದರ್ಶನವೊಂದರಲ್ಲಿ ತಿಳಿಸಿದರು. ವುಹಾನ್‌ನಲ್ಲಿ 2019ರ ಡಿಸೆಂಬರ್‌ನಲ್ಲೇ 10ಕ್ಕಿಂತಲೂ ಹೆಚ್ಚು ಮಾದರಿಯ ಕೊರೋನ ವೈರಸ್‌ಗಳು ಅಸ್ತಿತ್ವದಲ್ಲಿದ್ದದ್ದು ಪತ್ತೆಯಾಗಿದೆ ಎಂದು ಅವರು ನುಡಿದರು.

ಜನವರಿಯಲ್ಲಿ ಚೀನಾಕ್ಕೆ ಪ್ರಯಾಣಿಸಿದ ತಂಡವು ಅಲ್ಲಿ ನಾಲ್ಕು ವಾರಗಳನ್ನು ಕಳೆದು ವಾಪಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News