ದಿಗ್ಬಂಧನ ತೆರವುಗೊಳ್ಳದಿದ್ದರೆ ಪರಮಾಣು ತಪಾಸಣೆಗೆ ಮಿತಿ: ಇರಾನ್ ಎಚ್ಚರಿಕೆ

Update: 2021-02-15 18:24 GMT

ಟೆಹರಾನ್ (ಇರಾನ್), ಫೆ. 15: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವ ಇತರ ದೇಶಗಳು ಇರಾನ್ ಜೊತೆ ಸಹಕರಿಸದಿದ್ದರೆ, ಮುಂದಿನ ವಾರ ಆರಂಭಗೊಳ್ಳಲಿರುವ ಪರಮಾಣು ತಪಾಸಣೆಗೆ ಮಿತಿ ಹೇರದೆ ಇರಾನ್ ಸರಕಾರಕ್ಕೆ ಅನ್ಯಮಾರ್ಗವಿಲ್ಲ ಎಂದು ದೇಶದ ವಿದೇಶ ಸಚಿವಾಲಯ ತಿಳಿಸಿದೆ.

ಇರಾನ್‌ನ ತೈಲ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ಅವೆುರಿಕ ವಿಧಿಸಿರುವ ದಿಗ್ಬಂಧನಗಳು ಫೆಬ್ರವರಿ 21ರೊಳಗೆ ತೆರವುಗೊಳ್ಳದಿದ್ದರೆ ಒಪ್ಪಂದದ ಹೆಚ್ಚುವರಿ ಶಿಷ್ಟಾಚಾರವನ್ನು ಜಾರಿಗೊಳಿಸಲು ಇರಾನ್ ಸರಕಾರ ಮುಂದಾಗದಿರಬಹುದು ಎಂದು ವಿದೇಶ ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೆ ಹೇಳಿದರು.

ಹೆಚ್ಚುವರಿ ಶಿಷ್ಟಾಚಾರವು ಹೆಚ್ಚುವರಿ ತಪಾಸಣೆ ಅಧಿಕಾರವನ್ನು ಜಾಗತಿಕ ಪರಮಾಣು ನಿಗಾ ಸಂಸ್ಥೆಗೆ ನೀಡುತ್ತದೆ.

ಇರಾನ್ ಮತ್ತು ಆರು ಪ್ರಬಲ ದೇಶಗಳು 2015ರಲ್ಲಿ ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಬಳಿಕ, ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರವು 2018ರಲ್ಲಿ ಅಮೆರಿಕವನ್ನು ಈ ಒಪ್ಪಂದದಿಂದ ಹೊರಗೆ ತಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News