ಆಸ್ಟ್ರೇಲಿಯ ಸಂಸತ್‌ನಲ್ಲಿ ಅತ್ಯಾಚಾರ, ಮಹಿಳೆ ಆರೋಪ: ಕ್ಷಮೆ ಕೋರಿದ ಪ್ರಧಾನಿ ಸ್ಕಾಟ್ ಮೊರಿಸನ್

Update: 2021-02-16 18:10 GMT

ಕ್ಯಾನ್‌ಬೆರ (ಆಸ್ಟ್ರೇಲಿಯ), ಫೆ. 16: ದೇಶದ ಸಂಸತ್‌ನಲ್ಲಿ ಸಹೋದ್ಯೋಗಿಯೊಬ್ಬನಿಂದ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬುದಾಗಿ ಎಂಬುದಾಗಿ ಆಸ್ಟ್ರೇಲಿಯದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್, ಮಹಿಳೆಯ ಕ್ಷಮೆ ಕೋರಿದ್ದಾರೆ ಹಾಗೂ ಸರಕಾರದ ಕೆಲಸದ ಸ್ಥಳದ ಸಂಸ್ಕೃತಿ ಬಗ್ಗೆ ವಿವರವಾದ ತನಿಖೆ ನಡೆಸುವ ಭರವಸೆಯನ್ನು ನೀಡಿದ್ದಾರೆ.

2019ರ ಮಾರ್ಚ್‌ನಲ್ಲಿ ರಕ್ಷಣಾ ಸಚಿವೆ ಲಿಂಡಾ ರಿನಾಲ್ಡ್ಸ್‌ರ ಕಚೇರಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳಿದ್ದಾರೆ.ಪ್ರಧಾನಿ ಮೊರಿಸನ್‌ರ ಆಡಳಿತಾರೂಢ ಲಿಬರಲ್ ಪಾರ್ಟಿಯ ಪರವಾಗಿ ಕೆಲಸ ಮಡುತ್ತಿರುವ ವ್ಯಕ್ತಿಯೊಬ್ಬನಿಂದ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳಿದ್ದಾರೆ.

ಅದೇ ವರ್ಷದ ಎಪ್ರಿಲ್‌ನಲ್ಲಿ ನಾನು ಈ ವಿಷಯದಲ್ಲಿ ಪೊಲೀಸರೊಂದಿಗೆ ಮಾತನಾಡಿದ್ದೇನೆ. ಆದರೆ ನನ್ನ ಉದ್ಯೋಗದ ಭವಿಷ್ಯದ ದೃಷ್ಟಿಯಿಂದ ಅಧಿಕೃತ ದೂರು ದಾಖಲು ಮಾಡಿರಲಿಲ್ಲ ಎಂದು ಸ್ಥಙಳೀಯ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News