ಹಿಂದೂ ಸಾಗರ-ಪೆಸಿಫಿಕ್ ವಲಯ ಬಲಪಡಿಸಲು ‘ಕ್ವಾಡ್’ಗೆ ಶಕ್ತಿ: ಅಮೆರಿಕ

Update: 2021-02-23 17:32 GMT

ವಾಶಿಂಗ್ಟನ್, ಫೆ. 23: ಆಸ್ಟ್ರೇಲಿಯ, ಭಾರತ, ಜಪಾನ್ ಮತ್ತು ಅಮೆರಿಕವನ್ನು ಒಳಗೊಂಡ ನಾಲ್ಕು ದೇಶಗಳ ಒಕ್ಕೂಟ (ಕ್ವಾಡ್)ಕ್ಕೆ ಮಹತ್ವ ಹಾಗೂ ಸಾಮರ್ಥ್ಯವಿದೆ ಎಂಬುದಾಗಿ ಅವೆುರಿಕದ ಬೈಡನ್ ಆಡಳಿತ ಪರಿಗಣಿಸುತ್ತದೆ ಎಂದು ಆ ದೇಶದ ವಿದೇಶಾಂಗ ಇಲಾಖೆ ಹೇಳಿದೆ.

ಹಿಂದೂ ಮಹಾಸಾಗರ-ಪೆಸಿಫಿಕ್ ವಲಯವನ್ನು ಮುಕ್ತ ಹಾಗೂ ನಿರ್ಬಂಧರಹಿತವಾಗಿರಿಸುವ ಉದ್ದೇಶವನ್ನು ಕ್ವಾಡ್ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ವಲಯದಲ್ಲಿ ತನ್ನ ಹಕ್ಕು ಸ್ಥಾಪಿಸಲು ದಿನೇ ದಿನೇ ಪ್ರಯತ್ನಗಳನ್ನು ಹೆಚ್ಚಿಸುತ್ತಿರುವ ಚೀನಾವನ್ನು ನಿಯಂತ್ರಿಸುವುದಕ್ಕಾಗಿ ಈ ಗುಂಪು ರಚನೆಗೊಂಡಿದೆ.

‘‘ಕ್ವಾಡ್ ಗುಂಪು ಮಹತ್ವ ಹಾಗೂ ಸಾಮರ್ಥ್ಯವನ್ನು ಹೊಂದಿದೆ ಎಂಬುದಾಗಿ ನಾವು ಪರಿಗಣಿಸಿದ್ದೇವೆ. ಸಾಂಪ್ರದಾಯಿಕ ಆದ್ಯತಾ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸುವ ಮೂಲಕ ನಾವು ಈ ಗುಂಪನ್ನು ಬಲಪಡಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಮುಕ್ತ ಹಾಗೂ ನಿರ್ಬಂಧರಹಿತ ಹಿಂದೂ ಮಹಾ ಸಾಗರ-ಪೆಸಿಫಿಕ್ ವಲಯದ ಒಳಿತಿಗಾಗಿ ಅಮೆರಿಕ ಮತ್ತು ನಮ್ಮ ಕೆಲವು ಆಪ್ತ ಭಾಗೀದಾರರು ಜೊತೆಗೂಡಿರುವುದಕ್ಕೆ ಇದು ಉದಾಹರಣೆಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News