ಅಮೆರಿಕ: ಭಾರತೀಯ ಅವೆುರಿಕನ್ ಪರಿಸರ ತಜ್ಞೆ ಬಿದಿಶಾ ಭಟ್ಟಾಚಾರ್ಯಗೆ ಪ್ರಮುಖ ಹುದ್ದೆ

Update: 2021-02-23 18:19 GMT

ವಾಶಿಂಗ್ಟನ್, ಫೆ. 23: ಪರಿಸರ ಮತ್ತು ಇಂಧನ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಭಾರತೀಯ ಅವೆುರಿಕನ್ ಬಿದಿಶಾ ಭಟ್ಟಾಚಾರ್ಯರನ್ನು ಅಮೆರಿಕದ ಬೈಡನ್ ಆಡಳಿತವು ಕೃಷಿ ಇಲಾಖೆಯ ಮಹತ್ವದ ಹುದ್ದೆಯೊಂದಕ್ಕೆ ನೇಮಿಸಿದೆ.

ಗ್ರಾಮೀಣ ಭಾರತದಲ್ಲಿ ಸೌರ ಇಂಧನ ವ್ಯವಸ್ಥೆ ಪೂರೈಕೆಯಲ್ಲಿ ಮೂರು ವರ್ಷ ಕೆಲಸ ಮಾಡಿರುವ ಅವರನ್ನು ಫಾರ್ಮ್ ಸರ್ವಿಸ್ ಏಜನ್ಸಿ (ಎಫ್‌ಎಸ್‌ಎ)ಯಲ್ಲಿ ಹಿರಿಯ ನೀತಿ ಸಲಹೆಗಾರ್ತಿಯಾಗಿ ನೇಮಿಸಲಾಗಿದೆ.

ಇದಕ್ಕೂ ಮೊದಲು ಅವರು ಸೆಂಟರ್ ಫಾರ್ ಅವ್ಟೆುರಿಕನ್ ಪ್ರೊಗ್ರೆಸ್‌ನಲ್ಲಿ ಪರಿಸರ ಮತ್ತು ಇಂಧನ ನೀತಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News