ಟ್ರಂಪ್ ಅವಧಿಯ ಕಠಿಣ ಪೌರತ್ವ ಪರೀಕ್ಷೆಯನ್ನು ರದ್ದುಪಡಿಸಿ ಹಳೆ ಮಾದರಿ ಅನುಸರಿಸಲು ಬೈಡನ್ ಸರಕಾರ ನಿರ್ಧಾರ

Update: 2021-02-24 17:51 GMT

ವಾಶಿಂಗ್ಟನ್, ಫೆ. 24: ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ ಕಠಿಣ ಪೌರತ್ವ ಪರೀಕ್ಷೆಯನ್ನು ರದ್ದುಪಡಿಸಲು ಹಾಗೂ 2008ರ ಸರಳ ಪರೀಕ್ಷೆ ವ್ಯವಸ್ಥೆಗೆ ಮರಳಲು ಬೈಡನ್ ಸರಕಾರ ನಿರ್ಧರಿಸಿದೆ.

ಇದರೊಂದಿಗೆ, ಅರ್ಹ ಅಭ್ಯರ್ಥಿಗಳಿಗೆ ಅಮೆರಿಕದ ಪೌರತ್ವ ಪಡೆಯುವ ಪ್ರಕ್ರಿಯೆಯು ಸುಲಭವಾಗಲಿದೆ.

ನೂತನ ವ್ಯವಸ್ಥೆಯು ಮಾರ್ಚ್ 1ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್ 1ರಂದು ಪರಿಷ್ಕೃತ ಪೌರತ್ವ ಪರೀಕ್ಷೆಯನ್ನು ಜಾರಿಗೊಳಿಸಲಾಗಿತ್ತು.

ಅಮೆರಿಕದ ಪೌರತ್ವ ಪಡೆಯಲು ಇಚ್ಛಿಸುವವರು ಪೌರತ್ವ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಪರೀಕ್ಷೆಯ ವೇಳೆ ಅವರು ಅಮೆರಿಕದಲ್ಲಿ ಯಾವ ಮಾದರಿಯ ಸರಕಾರವಿದೆ ಹಾಗೂ ಅಲ್ಲಿನ ಇತಿಹಾಸ ಹಾಗೂ ಮೌಲ್ಯಗಳ ಬಗ್ಗೆ ತಮಗಿರುವ ಜ್ಞಾನವನ್ನು ಪ್ರದರ್ಶಿಸಬೇಕಾಗುತ್ತದೆ.

ಹಿಂದಿನ ಟ್ರಂಪ್ ಸರಕಾರವು 2020ರ ಪೌರತ್ವ ಪರೀಕ್ಷೆಗೆ ಕೆಲವು ಬದಲಾವಣೆಗಳನ್ನು ತಂದಿತು. ಪ್ರಶ್ನೆಗಳ ಸಂಖ್ಯೆಯನ್ನು 100ರಿಂದ 128ಕ್ಕೆ ಹೆಚ್ಚಿಸಿತು ಹಾಗೂ ಬಹುಆಯ್ಕೆಯ ಪ್ರಶ್ನೆಗಳ ಉತ್ತರಗಳಿಗೆ ರಾಜಕೀಯ ಮತ್ತು ಸೆದ್ಧಾಂತಿಕ ಆಯಾಮಗಳನ್ನು ಸೇರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News