ಹವಾಮಾನ ಬದಲಾವಣೆಯ ಕುರಿತಾದ ನಿರ್ಲಕ್ಷ್ಯ 'ಸಾಮೂಹಿಕ ಆತ್ಮಹತ್ಯೆ’ಯಂತೆ: ಅಮೆರಿಕ

Update: 2021-02-24 18:26 GMT

ವಾಶಿಂಗ್ಟನ್, ಫೆ. 24: ಹವಾಮಾನ ಬದಲಾವಣೆಯ ವಿಷಯದಲ್ಲಿ ಜಗತ್ತಿನ ಪ್ರಭಾವಿ ದೇಶಗಳ ನಿಷ್ಕ್ರಿಯತೆಯು ‘ಪರಸ್ಪರ ಆತ್ಮಹತ್ಯೆ ಒಪ್ಪಂದ’ಕ್ಕೆ ಸಮವಾಗಿದೆ ಎಂದು ಅಮೆರಿಕ ಎಚ್ಚರಿಸಿದೆ.
ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹವಾಮಾನ ಬದಲಾವಣೆ ಬಿಕ್ಕಟ್ಟನ್ನು ‘ಗುಣಿಸುತ್ತಾ ಹೋಗುವ ಬೆದರಿಕೆ’ ಎಂಬುದಾಗಿ ಪರಿಗಣಿಸಿದೆ ಎಂದು ಮಂಗಳವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷರ ವಿಶೇಷ ಪರಿಸರ ರಾಯಭಾರಿ ಜಾನ್ ಕೆರಿ ಹೇಳಿದರು.
‘‘ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಫಲವಾಗುವುದೆಂದರೆ ಪರಸ್ಪರ ಆತ್ಮಹತ್ಯೆ ಮಾಡಿಕೊಳ್ಳುವ ಒಪ್ಪಂದವೊಂದನ್ನು ಮಾಡಿಕೊಂಡಂತೆ’’ ಎಂದು ಕೆರಿ ಹೇಳಿದರು.

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ವಿಭಜಿತ ಬಣದ ಬೆಂಬಲಿಗರು, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮ ಒಲಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕಠ್ಮಂಡುವಿನ ಬೀದಿಗಳಲ್ಲಿ ಧರಣಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News