ಇಂಡೋನೇಶ್ಯ: ಚಿನ್ನದ ಗಣಿ ಕುಸಿತ; 3 ಸಾವು

Update: 2021-02-25 17:33 GMT

ಜಕಾರ್ತ (ಇಂಡೋನೇಶ್ಯ), ಫೆ. 25: ಇಂಡೋನೇಶ್ಯದಲ್ಲಿನ ಅಕ್ರಮ ಚಿನ್ನದ ಗಣಿಯೊಂದು ಬುಧವಾರ ಕುಸಿದಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ ಹೆಚ್ಚಿನವರು ಸಿಲುಕಿಕೊಂಡಿದ್ದು, ಅವರನ್ನು ಮೇಲೆತ್ತಲು ರಕ್ಷಣಾ ಸಿಬ್ಬಂದಿ ಗುರುವಾರವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇಂಡೋನೇಶ್ಯದ ಸುಲವೆಸಿ ದ್ವೀಪದ ಪರಿಗಿ ವೌಟೊಂಗ್‌ನಲ್ಲಿ ಬುಧವಾರ ಸಂಜೆ ಭೂಕುಸಿತ ಸಂಭವಿಸಿದಾಗ ಅಲ್ಲಿನ ಚಿನ್ನದ ಗಣಿ ಕುಸಿದಿದೆ. ಕನಿಷ್ಠ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ. ಸುಮಾರು 15 ಕಾರ್ಮಿಕರನ್ನು ಹೊರಗೆಳೆಯಲಾಗಿದೆ.

ಕನಿಷ್ಠ ಐವರು ಈಗಲೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News