ಯುದ್ಧವಿರಾಮದ ಹೊಣೆ ಭಾರತದ ಮೇಲೆ: ಇಮ್ರಾನ್ ಖಾನ್
Update: 2021-02-27 23:42 IST
ಇಸ್ಲಾಮಾಬಾದ್ (ಪಾಕಿಸ್ತಾನ), ಫೆ. 27: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಏರ್ಪಟ್ಟಿರುವ ಯುದ್ಧವಿರಾಮ ಒಪ್ಪಂದವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಸ್ವಾಗತಿಸಿದ್ದಾರೆ ಹಾಗೂ ಇದರ ಹೊಣೆ ಭಾರತದ ಮೇಲಿದೆ ಎಂದಿದ್ದಾರೆ.
‘‘ನಿಯಂತ್ರಣ ರೇಖೆಯುದ್ದಕ್ಕೂ ಏರ್ಪಟ್ಟಿರುವ ಯುದ್ಧವಿರಾಮವನ್ನು ನಾನು ಸ್ವಾಗತಿಸುತ್ತೇನೆ. ಇನ್ನಷ್ಟು ಬೆಳವಣಿಗೆಗಳಿಗಾಗಿ ಸೂಕ್ತ ಪರಿಸರವನ್ನು ಸೃಷ್ಟಿಸುವ ಹೊಣೆ ಭಾರತದ ಮೇಲಿದೆ’’ ಎಂಬುದಾಗಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 25ರಿಂದ ಜಾರಿಗೆ ಬರುವಂತೆ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಯುದ್ಧವಿರಾಮ ಏರ್ಪಡಿಸಲು ಉಭಯ ದೇಶಗಳು ಒಪ್ಪಿದ ಎರಡು ದಿನಗಳ ಬಳಿಕ ಪಾಕಿಸ್ತಾನದ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.