×
Ad

ಜಾನ್ಸನ್ ಆ್ಯಂಡ್ ಜಾನ್ಸನ್‌ನ ಏಕ ಡೋಸ್ ಕೋವಿಡ್ ಲಸಿಕೆಗೆ ಅಮೆರಿಕ ಅಸ್ತು

Update: 2021-02-28 22:41 IST

 ವಾಶಿಂಗ್ಟನ್,ಫೆ.28: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ಅಭಿವೃದ್ಧಿಪಡಿಸಿರುವ ಏಕ ಡೋಸ್‌ನ ಕೋವಿಡ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅಮೆರಿಕ ಅನುಮತಿ ನೀಡಿದೆ. ಜಗತ್ತಿನಲ್ಲೇ ಮಾನ್ಯತೆ ಪಡೆದ ಪ್ರಪ್ರಥಮ ಏಕ ಡೋಸ್‌ನ ಕೋವಿಡ್ 19 ಲಸಿಕೆ ಇದಾಗಿದ್ದು, ಇದಕ್ಕೆ ಅಮೆರಿಕದ ಆಹಾರ ಹಾಗೂ ಔಷಧಿ ಇಲಾಖೆ ಅನುಮತಿ ನೀಡಿದೆ. ಒಂದೇ ಡೋಸ್‌ನಲ್ಲಿ ನೀಡುವ ಲಸಿಕೆ ಇದಾಗಿರುವುದರಿಂದ ಲಸಿಕೆ ವಿತರಣೆ ಕಾರ್ಯ ಇನ್ನಷ್ಟು ವೇಗ ಪಡೆಯುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜೂನ್ ತಿಂಗಳಿನೊಳಗೆ 10 ಕೋಟಿ ಲಸಿಕೆಗಳನ್ನು ಅಮೆರಿಕಾದ್ಯಂತ ವಿತರಣೆ ಮಾಡುವ ಗುರಿಯನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News