×
Ad

ಈ ದೇಶದಲ್ಲಿ ಕಳೆದ ವರ್ಷ ಹೆಚ್ಚು ಸಂಖ್ಯೆಯ ಪತ್ರಕರ್ತರ ಉಚ್ಚಾಟನೆ

Update: 2021-03-02 23:35 IST

ಬೀಜಿಂಗ್, ಮಾ. 2: ಚೀನಾದಲ್ಲಿ ವಿದೇಶಿ ಪತ್ರಕರ್ತರು ಕೆಲಸ ಮಾಡುವ ಪರಸ್ಥಿತಿ 2020ರಲ್ಲಿ ಹದಗೆಟ್ಟಿದ್ದು, ಅದು 18 ವರದಿಗಾರರನ್ನು ಉಚ್ಚಾಟಿಸಿದೆ ಎಂದು ಚೀನಾದ ವಿದೇಶಿ ವರದಿಗಾರರ ಕ್ಲಬ್ ಸೋಮವಾರ ಹೇಳಿದೆ. ಇದು 1989ರ ಬಳಿಕದ ಅತಿ ದೊಡ್ಡ ಸಂಖ್ಯೆಯಾಗಿದೆ. 1989ರಲ್ಲಿ ನಡೆದ ತಿಯನಾನ್ಮೆನ್ ಚೌಕ ಹತ್ಯಾಕಾಂಡದ ಬಳಿಕೆ ಅತಿ ಹೆಚ್ಚು ಸಂಖ್ಯೆಯ ಪತ್ರಕರ್ತರನ್ನು ಉಚ್ಚಾಟಿಸಲಾಗಿತ್ತು.

ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ವರದಿ ಮಾಡುವ ಪತ್ರಕರ್ತರನ್ನು ‘ಪತ್ತೆಹಚ್ಚಿ, ಬೆನ್ನತ್ತಿ, ಉಚ್ಚಾಟಿಸುವ’ ಕೆಲಸವನ್ನು ಚೀನೀ ಅಧಿಕಾರಿಗಳು ಮಾಡಿದ್ದಾರೆ ಎಂದು ಕ್ಲಬ್ ಹೇಳಿದೆ.

‘‘ವಿದೇಶಿ ವರದಿಗಾರರ ಕೆಲಸವನ್ನು ಬುಡಮೇಲುಗೊಳಿಸುವ ತಮ್ಮ ಪ್ರಯತ್ನಗಳನ್ನು ಚೀನಾದ ಅಧಿಕಾರಿಗಳು 2020ರಲ್ಲಿ ನಾಟಕೀಯವಾಗಿ ಹೆಚ್ಚಿಸಿದರು. ಕೊರೋನ ವೈರಸನ್ನು ನಿಯಂತ್ರಿಸಲು ಜಾರಿಗೊಳಿಸಲಾದ ಕಣ್ಗಾವಲು ವ್ಯವಸ್ಥೆಗಳು ಸೇರಿದಂತೆ ಪ್ರಭುತ್ವದ ಎಲ್ಲ ಘಟಕಗಳನ್ನು ಪತ್ರಕರ್ತರು, ಅವರ ಚೀನೀ ಸಹೋದ್ಯೋಗಿಗಳು ಮತ್ತು ವಿದೇಶಿ ಪತ್ರಿಕೆಗಳು ಯಾರನ್ನು ಸಂದರ್ಶಿಸಬೇಕೆಂದು ಬಯಸಿವೆಯೋ ಅವರನ್ನು ಬೆದರಿಸಲು ಹಾಗೂ ಅವರಿಗೆ ಕಿರುಕುಳ ನೀಡಲು ನಿಯೋಜಿಸಲಾಯಿತು’’ ಎಂದು ಕ್ಲಬ್ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News