ನವಾಲ್ನಿಗೆ ವಿಷ: ರಶ್ಯ ವಿರುದ್ಧ ದಿಗ್ಬಂಧನಕ್ಕೆ ಅಮೆರಿಕ ಸಿದ್ಧತೆ
Update: 2021-03-02 23:39 IST
ವಾಶಿಂಗ್ಟನ್, ಮಾ. 2: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಗೆ ವಿಷಪ್ರಾಶನ ಮಾಡಿರುವುದಕ್ಕಾಗಿ ಮತ್ತು ಅವರನ್ನು ಜೈಲಿಗೆ ಹಾಕಿರುವುದಕ್ಕಾಗಿ ರಶ್ಯದ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಸಿಎನ್‌ಎನ್ ಸೋಮವಾರ ವರದಿ ಮಾಡಿದೆ.
ದಿಗ್ಬಂಧನಗಳ ವಿವರಗಳು ಮತ್ತು ಅದರ ನಿಖರ ಸಮಯದ ಬಗ್ಗೆ ನಿರ್ಧರಿಸಲು ಅಮೆರಿಕವು ಯುರೋಪಿಯನ್ ಒಕ್ಕೂಟದೊಂದಿಗೆ ಸಮನ್ವಯ ಸಾಧಿಸಲಿದೆ ಎಂದು ಅಮೆರಿಕದ ಇಬ್ಬರು ಅಧಿಕರಿಗಳನ್ನು ಉಲ್ಲೇಙಖಿಸಿ ಸಿಎನ್‌ಎನ್ ವರದಿ ಮಾಡಿದೆ.
ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಸ್ನೇಹವು ಭಾರೀ ಕುಖ್ಯಾತಿ ಗಳಿಸಿತ್ತು. ರಶ್ಯದ ಕೃತ್ಯಗಳಿಗೆ ಅದನ್ನು ದಂಡಿಸಲು ಟ್ರಂಪ್ ಹೆಚ್ಚಿನ ಸಂದರ್ಭಗಳಲ್ಲಿ ಒಪ್ಪುತ್ತಿರಲಿಲ್ಲ.