ಭಾರತ, ಜಪಾನ್‌ಗೆ ಬಂದರಿನ ನಿರ್ವಹಣೆ ನೀಡಲು ಶ್ರೀಲಂಕಾ ಮುಂದು

Update: 2021-03-02 18:17 GMT

ಕೊಲಂಬೊ (ಶ್ರೀಲಂಕಾ), ಮಾ. 2: ಆಯಕಟ್ಟಿನ ಪ್ರದೇಶದಲ್ಲಿರುವ ಆಳಸಮುದ್ರ ಬಂದರಿನ ನಿರ್ವಹಣೆಯನ್ನು ಶ್ರೀಲಂಕಾವು ಭಾರತ ಮತ್ತು ಜಪಾನ್‌ಗಳಿಗೆ ನೀಡಲಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಈ ಮೂಲಕ ಶ್ರೀಲಂಕಾವು ಚೀನಾದ ಹೆಚ್ಚುತ್ತಿರುವ ಪ್ರಾದೇಶಿಕ ಪ್ರಭಾವವನ್ನು ನಿಭಾಯಿಸಲು ಸಾಂಪ್ರದಾಯಿಕ ಸಮತೋಲನ ಕ್ರಮಗಳಿಗೆ ಮುಂದಾಗಿದೆ.

ಕೊಲಂಬೊ ಬಂದರಿನಲ್ಲಿ ಚೀನಾ ನಿಯಂತ್ರಣದ ಕಂಟೇನರ್ ಜೆಟ್ಟಿ ಸಮೀಪದಲ್ಲಿರುವ ಈಸ್ಟ್ ಕಂಟೇನರ್ ಟರ್ಮಿನಲನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಭಾರತ ಮತ್ತು ಜಪಾನ್‌ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದವೊಂದರಿಂದ ಶ್ರೀಲಂಕಾ ಕಳೆದ ತಿಂಗಳು ಹಠಾತ್ತನೆ ಹಿಂದೆ ಸರಿದಿತ್ತು.

ಆದರೆ, ಮಂಗಳವಾರ ವೆಸ್ಟ್ ಕಂಟೇನರ್ ಟರ್ಮಿನಲನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಭಾರತ ಮತ್ತು ಜಪಾನ್‌ಗಳಿಗೆ ನೀಡುವ ಮೂಲಕ ಶ್ರೀಲಂಕಾ ತನ್ನ ಹಿಂದಿನ ನಿಲುವಿನಿಂದ ಹಿಂದೆ ಸರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News