ಭಾರತದ ಗಡಿ ದಾಟುವ ಉಗ್ರರ ಪ್ರಯತ್ನಗಳನ್ನು ಖಂಡಿಸಿದ ಅಮೆರಿಕ

Update: 2021-03-05 17:29 GMT

ವಾಶಿಂಗ್ಟನ್, ಮಾ. 5: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ನಿಯಂತ್ರಣ ರೇಖೆಯನ್ನು ದಾಟಿ ಭಾರತಕ್ಕೆ ಹೋಗಲು ಭಯೋತ್ಪಾದಕರು ನಡೆಸುತ್ತಿರುವ ಪ್ರಯತ್ನಗಳನ್ನು ಅಮೆರಿಕ ಖಂಡಿಸಿದೆ. ಎರಡು ದೇಶಗಳ ನಡುವೆ 2003ರಲ್ಲಿ ಏರ್ಪಟ್ಟಿರುವ ಯುದ್ಧವಿರಾಮ ಒಪ್ಪಂದ ಶರತ್ತುಗಳನ್ನು ಪೂರೈಸುವ ಮೂಲಕ ಗಡಿಯಲ್ಲಿನ ಉದ್ವಿಗ್ನತೆಯನ್ನು ನಿವಾರಿಸುವಂತೆ ಅದು ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಕರೆ ನೀಡಿದೆ.

ಫೆಬ್ರವರಿ 25ರಂದು ಭಾರತ ಮತ್ತು ಪಾಕಿಸ್ತಾನಗಳ ಸೇನಾ ಕಾರ್ಯಾಚರಙಣೆಗಳ ಮಹಾನಿರ್ದೇಶಕರ ನಡುವೆ ಹಾಟ್‌ಲೈನ್‌ನಲ್ಲಿ ನಡೆದ ಮಾತುಕತಕೆಯ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಈ ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಏರ್ಪಟ್ಟಿರುವ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆ ಮಾತುಕತೆಯ ವೇಳೆ ನಿರ್ಧರಿಸಲಾಗಿತ್ತು. ನಿಯಂತ್ರಣ ರೇಖೆಯಲ್ಲಿ ಮತ್ತು ಇತರ ಕ್ಷೇತಗಳಲ್ಲಿ ಗುಂಡಿನ ವಿನಿಮಯವನ್ನು ನಿಲ್ಲಿಸಲೂ ಉಭಯ ದೇಶಘಳು ಒಪ್ಪಿಕೊಂಡಿದ್ದವು.

‘‘ಜಮ್ಮು ಮತ್ತು ಕಾಶ್ಮೀರದಲ್ಲಿನ ಬೆಳವಣಿಗೆಯನ್ನು ನಾವು ನಿಕಟ್ವವಾಗಿ ಗಮನಿಸುತ್ತಿದ್ದೇವೆ. ಈ ವಲಯದ ಕುರಿತ ನಮ್ಮ ನಿಲುವು ಬದಲಾಗಿಲ್ಲ. 2003ರ ಯುದ್ಧವಿರಾಮ ಒಪ್ಪಂದವನ್ನು ಅನುಸರಿಸುವ ಮೂಲಕ ಉದ್ವಿಜಗ್ನತೆಗೆ ತೆರೆ ಎಳೆಯುವಂತೆ ನಾವು ಉಭಯ ದೇಶಳಿಗೆ ಕರೆ ನೀಡುತ್ತೇವೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರೈಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News