×
Ad

ರೈತರ ಪ್ರತಿಭಟನೆ ಆಂತರಿಕ ವಿಚಾರವಾದರೂ, ಬ್ರಿಟನ್ ಮೇಲೆ ಪರಿಣಾಮ ಬೀರುತ್ತದೆ ಎಂದ ಬ್ರಿಟಿಷ್ ಹೈಕಮಿಷನರ್

Update: 2021-03-06 15:43 IST

 ಹೊಸದಿಲ್ಲಿ: ರೈತರ ಪ್ರತಿಭಟನೆ ಭಾರತದ ಆಂತರಿಕ ವಿಚಾರವಾಗಿದ್ದರೂ ಬ್ರಿಟನ್‍ನಲ್ಲಿ  ಬಹಳಷ್ಟು ಸಂಖ್ಯೆಯ ಭಾರತೀಯರು ಇರುವುದರಿಂದ ಪ್ರತಿಭಟನೆಗಳು ಅಲ್ಲಿನ ರಾಜಕಾರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಬ್ರಿಟಿಷ್ ಸಂಸತ್ತು ಸೋಮವಾರ  ಭಾರತದ ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಲಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.

ʼನಿಮ್ಮ ರಾಜಕೀಯ ನಮ್ಮ ರಾಜಕೀಯʼ ಎಂದು  ವಿದೇಶಾಂಗ ಕಾರ್ಯದರ್ಶಿ (ಡಾಮಿನಿಕ್ ರಾಬ್) ಇಲ್ಲಿಗೆ ಬಂದಾಗ ಹೇಳಿದ್ದರು. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಭಾರತದಲ್ಲಿ ನಡೆಯುವ ಘಟನಾವಳಿಗಳು ಬ್ರಿಟನ್‍ನಲ್ಲೂ ಪರಿಣಾಮ  ಬೀರುತ್ತೆ ಏಕೆಂದರೆ ಅಲ್ಲಿ ಭಾರತೀಯ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ, ಆದುದರಿಂದ ಈ ವಿಚಾರಗಳು ಚರ್ಚೆಗೊಳಗಾಗುತ್ತವೆ" ಎಂದು  ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅಲೆಕ್ಸ್ ಹೇಳಿದರು.

ಬ್ರಿಟನ್ ದೇಶದ ಸಂಸತ್ತು ಮಾರ್ಚ್ 8 ಸೋಮವಾರದಂದು "ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ಪ್ರತಿಭಟನಾಕಾರರ ಸುರಕ್ಷತೆ" ಎಂಬ ವಿಚಾರದ ಮೇಲೆ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಇ-ಪೆಟಿಷನ್ ಒಂದಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಬ್ರಿಟಿಷ್ ಸಂಸತ್ತಿನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News