ಸ್ವಿಟ್ಸರ್‌ಲ್ಯಾಂಡ್: ಬುರ್ಖಾ ನಿಷೇಧದ ಪರ ಕಿರು ಬಹುಮತ

Update: 2021-03-08 17:41 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 8: ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಧರಿಸುವುದನ್ನು ನಿಷೇಧಿಸುವ ಆದೇಶಕ್ಕೆ ರವಿವಾರ ಕಿರು ಅಂತರದ ಬಹುಮತ ವ್ಯಕ್ತವಾಗಿದೆ.

ಆದೇಶದ ಪರವಾಗಿ 51.21 ಶೇಕಡ ಮತಗಳು ಬಿದ್ದರೆ, 50.8 ಶೇಕಡ ಮತದಾರರು ಅದನ್ನು ವಿರೋಧಿಸಿದ್ದಾರೆ.

ನಿಷೇಧದ ಪರವಾಗಿ 14,26,992 ಮತದಾರರು ಮತ ಚಲಾಯಿಸಿದರೆ, 13,59,621 ಮಂದಿ ನಿಷೇಧವನ್ನು ವಿರೋಧಿಸಿ ಮತ ಚಲಾಯಿಸಿದರು. ಹಲವು ವರ್ಷಗಳ ಚರ್ಚೆಯ ಬಳಿಕ ಸ್ವಿಟ್ಸರ್‌ಲ್ಯಾಂಡ್‌ನಲ್ಲಿ ಈ ವಿಷಯದಲ್ಲಿ ಜನಮತಗಣನೆ ನಡೆದಿದೆ.

ಸ್ವಿಟ್ಸರ್‌ಲ್ಯಾಂಡ್‌ನ ರಸ್ತೆಗಳಲ್ಲಿ ಮಹಿಳೆಯರು ಬುರ್ಖಾ ಧರಿಸಿ ಓಡಾಡುವ ದೃಶ್ಯ ತೀರಾ ಅಪರೂಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News