ಆಸ್ಟ್ರಿಯ: ಮಹಿಳೆ ಸಾವು; ಆ್ಯಸ್ಟ್ರಝೆನೆಕ ಲಸಿಕೆ ಸ್ಥಗಿತ

Update: 2021-03-08 17:42 GMT

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಮಾ. 8: ಆಸ್ಟ್ರಿಯದಲ್ಲಿ ಆ್ಯಸ್ಟ್ರಝೆನೆಕ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿದ ಓರ್ವ ವ್ಯಕ್ತಿ ಸಾವನ್ನಪ್ಪಿದ ಹಾಗೂ ಇನ್ನೋರ್ವ ವ್ಯಕ್ತಿ ಅಸ್ವಸ್ಥಗೊಂಡ ಬಳಿಕ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ತಿಳಿಸಿದೆ.

‘‘ಲೋವರ್ ಆಸ್ಟ್ರಿಯ ರಾಜ್ಯದ ಝ್ವೆಟಿ ಜಿಲ್ಲೆಯ ಕ್ಲಿನಿಕ್ ಒಂದರಲ್ಲಿ ಒಂದೇ ಬ್ಯಾಚ್‌ನ ಆ್ಯಸ್ಟ್ರಝೆನೆಕ ಲಸಿಕೆಗಳಿಗೆ ಸಂಬಂಧಿಸಿ ಎರಡು ದೂರುಗಳು ದಾಖಲಾಗಿವೆ’’ ಎಂದು ಅದು ಹೇಳಿದೆ.

ಲಸಿಕೆ ಸ್ವೀಕರಿಸಿದ ಬಳಿಕ, ಓರ್ವ 49 ವರ್ಷದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಸಂಭವಿಸಿ ಮೃತಪಟ್ಟರು. 35 ವರ್ಷದ ಇನ್ನೋರ್ವ ಮಹಿಳೆ ಅಸ್ವಸ್ಥಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News