×
Ad

ಕಾಂಗೊದಲ್ಲಿ ಚಿನ್ನದ ನಿಕ್ಷೇಪಗಳಿಂದ ಕೂಡಿದ ಪರ್ವತ ಪತ್ತೆ!

Update: 2021-03-09 23:44 IST

ಬ್ರಾಝಾವಿಲ್:ಕಾಂಗೊ ಡೆಮಾಕ್ರಟಿಕ್ ರಿಪಬ್ಲಿಕ್ ಗ್ರಾಮವೊಂದರಲ್ಲಿ ಇತ್ತೀಚೆಗೆ ಚಿನ್ನದ ಸಮೃದ್ಧ ನಿಕ್ಷೇಪಗಳಿಂದ ಕೂಡಿದ ಪರ್ವತವೊಂದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ  ಅಲ್ಲಿನ ಅಧಿಕಾರಿಗಳು ಗ್ರಾಮದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿದ್ದಾರೆ.

ಕಾಂಗೋದ ದಕ್ಷಿಣ ಕಿವು ಪ್ರಾಂತ್ಯದ ಲುಹಿಹಿಯಲ್ಲಿ ಪತ್ತೆಯಾದ ಈ ಪರ್ವತದತ್ತ ನೂರಾರು ಗ್ರಾಮಸ್ಥರು ಧಾವಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಹವ್ಯಾಸಿ ಪತ್ರಕರ್ತ ಅಹ್ಮದ್  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೆ ಈ ವೀಡಿಯೊದಲ್ಲಿ ಸ್ಥಳೀಯರು ಮಣ್ಣಿನಿಂದ ಚಿನ್ನವನ್ನು ಹೊರ ತೆಗೆಯಲು ಹಾರೆ ಹಾಗೂ ಪಿಕ್ಕಾಸಿನಿಂದ ನೆಲವನ್ನು ಅಗೆಯುತ್ತಿರುವುದು ಕಂಡುಬಂದಿದೆ.

ಸಂಪೂರ್ಣ ಚಿನ್ನದಿಂದ ಕೂಡಿರುವ ಪರ್ವತ ಪತ್ತೆಯಾಗಿರುವ ಬಗೆಗಿನ ಕಾಂಗೋ ಗಣರಾಜ್ಯದ ಈ ವೀಡಿಯೊ ಕೆಲವು ಗ್ರಾಮಸ್ಥರಿಗೆ ಭಾರೀ ಆಶ್ವರ್ಯವನ್ನುಂಟು ಮಾಡಿದೆ.. ಜನರು ಚಿನ್ನದ ನಿಕ್ಷೇಪಗಳ ಒಳಗೊಂಡ ಮಣ್ಣನ್ನು ಅಗೆದು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಅದರಿಂದ ಚಿನ್ನವನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ಅಹ್ಮದ್ ಟ್ವಿಟರ್ ನಲ್ಲಿ ಬರೆದಿದ್ದಾರೆ.

ಅಹ್ಮದ್ ಅವರ ಮತ್ತೊಂದು ವೀಡಿಯೊದಲ್ಲಿ ಸ್ಥಳೀಯರು ಮಣ್ಣನ್ನು ತೊಳೆಯುತ್ತಿರುವುದು ಹಾಗೂ ಅದರಿಂದ ಚಿನ್ನವನ್ನು ಪ್ರತ್ಯೇಕಿಸುತ್ತಿರುವುದು  ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News