×
Ad

ಭಾರತದ ಕೊರೋನ ಲಸಿಕೆ ಸ್ವೀಕರಿಸಿದ ಕಾಂಬೋಡಿಯ ಪ್ರಧಾನಿ

Update: 2021-03-10 22:35 IST
 ಕಾಂಬೋಡಿಯ ಪ್ರಧಾನಿ

ಫ್ನೋಮ್ ಪೆನ್ (ಕಾಂಬೋಡಿಯ), ಮಾ. 10: ಕಾಂಬೋಡಿಯದ ಪ್ರಧಾನಿ ಸಮ್‌ದೇಚ್ ಹುನ್ ಸೆನ್ ಮತ್ತು ದೇಶದ ಪ್ರಥಮ ಮಹಿಳೆ ಬುಧವಾರ ಭಾರತದಲ್ಲಿ ತಯಾರಾದ ಕೊರೋನ ವೈರಸ್ ಲಸಿಕೆಯ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

 ‘‘ಪ್ರಧಾನಿ ಹುನ್ ಸೆನ್ ಭಾರತದಲ್ಲಿ ತಯಾರಾದ ಆ್ಯಸ್ಟ್ರಝೆನೆಕ ಲಸಿಕೆಯನ್ನು ಪ್ರಥಮ ಮಹಿಳೆ, ಹಿರಿಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸ್ವೀಕರಿಸಿದರು ಎಂದು ಕಾಂಬೋಡಿಯದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಕಾಂಬೋಡಿಯಕ್ಕೆ ಒಂದು ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಪೂರೈಸಲು ಭಾರತ ಫೆಬ್ರವರಿ 6ರಂದು ಅನುಮೋದನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News