ಸ್ವತಂತ್ರ ಧ್ವನಿಗಳನ್ನು ಹಿಂಸಿಸುವುದನ್ನು ನಿಲ್ಲಿಸಿ: ರಶ್ಯಕ್ಕೆ ಅಮೆರಿಕ ಕರೆ

Update: 2021-03-14 17:58 GMT

ವಾಶಿಂಗ್ಟನ್, ಮಾ. 14: ಸ್ವತಂತ್ರ ಧ್ವನಿಗಳನ್ನು ಹಿಂಸಿಸುವುದನ್ನು ನಿಲ್ಲಿಸುವಂತೆ ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಶನಿವಾರ ರಶ್ಯಕ್ಕೆ ಕರೆ ನೀಡಿದ್ದಾರೆ.

ರಶ್ಯದಲ್ಲಿ ಸುಮಾರು 200 ಪ್ರತಿಪಕ್ಷ ರಾಜಕಾರಣಿಗಳು ಮತ್ತು ಮುನಿಸಿಪಲ್ ಡೆಪ್ಯುಟಿಗಳ ಬಂಧನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷಗಳು ನಡೆಸುವ ಪ್ರತಿಭಟನೆಗಳನ್ನು ರಶ್ಯ ಪೊಲೀಸರು ನಿಯಮಿತವಾಗಿ ಚದುರಿಸುತ್ತಾರಾದರೂ, ಮಾಸ್ಕೋದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಮುನಿಸಿಪಲ್ ಡೆಪ್ಯುಟಿಗಳ ಸಾಮೂಹಿಕ ಬಂಧನ ಅಭೂತಪೂರ್ವವಾಗಿದೆ.

 ರಶ್ಯದಲ್ಲಿ ಚುನಾವಣೆಗಳು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಟೀಕಾಕಾರನ್ನು ದಮನಿಸಲು ಅಧಿಕಾರಿಗಳು ಮುಂದಾಗಿರುವಂತೆಯೇ, ‘‘ಸ್ವತಂತ್ರ ಧ್ವನಿಗಳನ್ನು ಹತ್ತಿಕ್ಕುವುದನ್ನು ನಿಲ್ಲಿಸುವಂತೆ ನಾವು ಕರೆ ನೀಡುತ್ತೇವೆ’’ ಎಂಬುದಾಗಿ ಬ್ಲಿಂಕನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News