ಕೋವಿಡ್-19 ಉಲ್ಬಣ: 12 ದೇಶಗಳಿಗೆ ಪಾಕ್ ಪ್ರಯಾಣ ನಿಷೇಧ

Update: 2021-03-21 18:19 GMT

ಇಸ್ಲಾಮಾಬಾದ್,ಮಾ.21: ಕೋವಿಡ್-19 ಸೋಂಕಿನ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ದಕ್ಷಿಣ ಆಫ್ರಿಕಾ, ರ್ವಾಂಡಾ ಹಾಗೂ ತಾಂಝಾನಿಯಾ ಸೇರಿದಂತೆ 12 ದೇಶಗಳಿಗೆ ಸಂಪೂರ್ಣ ಪ್ರಯಾಣ ನಿಷೇಧವನ್ನು ಹೇರಿದೆ. ಪಾಕಿಸ್ತಾನದಲ್ಲಿ ರವಿವಾರ 3,667 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಈವರೆಗೆ ಆ ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 6,26,802ಕ್ಕೇರಿದೆ.

   ಪಾಕಿಸ್ತಾನದಲ್ಲಿ ಕೊರೋನ ವೈರಸ್‌ನ ದಕ್ಷಿಣ ಆಫ್ರಿಕ ಹಾಗೂ ಬ್ರೆಝಿಲ್ ಪ್ರಭೇದಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಪ್ರಾಧಿಕಾರವು ಕೊರೋನ ಹಾವಳಿಯಿರುವ ಎ,ಬಿ ಹಾಗೂ ಸಿ ಶ್ರೇಣಿಯ ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆ ಪೈಕಿ ಸಿ ಶ್ರೇಣಿಯಲ್ಲಿರುವ 12 ದೇಶಗಳಿಗೆ ಸಂಪೂರ್ಣ ಪ್ರಯಾಣ ನಿಷೇಧವನ್ನು ಹೇರಿದೆ.

ಬೊಟ್ಸ್ವಾನಾ, ಬ್ರೆಝಿಲ್, ಕೊಲಂಬಿಯಾ, ಕೊಮೊರೊಸ್, ಘಾನಾ, ಕೀನ್ಯಾ, ಮೊಝಾಂಬಿಕ್,ಪೆರು, ರ್ವಾಂಡ, ದಕ್ಷಿಣ ಆಫ್ರಿಕ,ತಾಂಝಾನಿಯಾ ಹಾಗೂ ಝಾಂಬಿಯಾ ಸಿ ಶ್ರೇಣಿಯಲ್ಲಿರುವ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News