ಮ್ಯಾನ್ಮಾರ್ ಸೇನಾ ಹಿತಾಸಕ್ತಿ ವಿರುದ್ಧ ಬ್ರಿಟನ್ ದಿಗ್ಬಂಧನ
Update: 2021-04-01 23:56 IST
ಲಂಡನ್, ಎ. 1: ‘ಗಂಭೀರ ಮಾನವಹಕ್ಕುಗಳ ಉಲ್ಲಂಘನೆಗಳಲ್ಲಿ’ ವಹಿಸಿರುವ ಪಾತ್ರಕ್ಕಾಗಿ ಮ್ಯಾನ್ಮಾರ್ ಆರ್ಥಿಕ ನಿಗಮ (ಎಂಇಸಿ)ದ ವಿರುದ್ಧ ಬ್ರಿಟನ್ ಗುರುವಾರ ದಿಗ್ಬಂಧನಗಳನ್ನು ಘೋಷಿಸಿದೆ.
ಮ್ಯಾನ್ಮಾರ್ ಸೇನೆಯೊಂದಿಗೆ ನಂಟು ಹೊಂದಿರುವ ಈ ನಿಗಮದ ವಿರುದ್ಧ ಅವೆುರಿಕ ಕ್ರಮಗಳನ್ನು ತೆಗೆದುಕೊಂಡ ಒಂದು ವಾರದ ಬಳಿಕ ಬ್ರಿಟನ್ ದಂಡನಾ ಕ್ರಮಗಳನ್ನು ತೆಗೆದುಕೊಂಡಿದೆ.
ಎಂಇಸಿ ಮತ್ತು ಸೇನೆಯೊಂದಿಗೆ ನಂಟು ಹೊಂದಿರುವ ಇನ್ನೊಂದು ಸಂಸ್ಥೆ ಮ್ಯಾನ್ಮಾರ್ ಎಕನಾಮಿಕ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಂಇಎಚ್‌ಎಲ್) ವ್ಯಾಪಾರ, ಅಬಕಾರಿ, ಸಿಗರೆಟ್ ಉತ್ಪಾದನೆ ಮತ್ತು ದೈನಂದಿನ ಬಳಕೆಯ ವಸ್ತುಗಳ ಉತ್ಪಾದನೆ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿವೆ.