ನೇಪಾಳದಲ್ಲಿ ಹೊಸ ಸರಕಾರ ರಚನೆಗೆ ನೇಪಾಳ ಕಾಂಗ್ರೆಸ್ ನಿರ್ಧಾರ
Update: 2021-04-04 23:18 IST
ಕಠ್ಮಂಡು,ಎ.4: ನೇಪಾಳದ ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್ , ಪ್ರಧಾನಿ ಕೆ.ಪಿ. ಶರ್ಮಾ ಓಲಿ ಪದಚ್ಯುತಿಗೊಳಿಸಿ, ತನ್ನ ನಾಯಕತ್ವದಲ್ಲಿ ನೂತನ ಸರಕಾರವನ್ನು ರಚಿಸಲು ಮುಂದಡಿಯಿಟ್ಟಿದೆ. ಸಿಪಿಎನ್- ಮಾವೋಯಿಸ್ಟ್ ಸೆಂಟರ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಪರ್ಯಾಯ ಸರಕಾರ ರಚಿಸುವುದಾಗಿ ಅದು ಘೋಷಿಸಿದೆ.
ನೇಪಾಳಿ ಕಾಂಗ್ರೆಸ್‌ನ ಕೇಂದ್ರೀಯ ಕಾರ್ಯಕಾರಿ ಸಮಿತಿಯು ಶನಿವಾರ ತುರ್ತು ಸಭೆ ನಡೆಸಿ, ತನ್ನ ನಾಯಕತ್ವದಲ್ಲಿ ನೂತನ ಸರಕಾರವನ್ನು ರಚಿಸಲು ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಪ್ರಕಾಶ್ ಮಾನ್ ಸಿಂಗ್ ತಿಳಿಸಿದ್ದಾರೆ.
ಅಧಿಕಾರದಿಂದ ಕೆಳಗಿಳಿಯುವಂತೆ ಹಾಗೂ ನೂತನ ಸರಕಾರ ರಚನೆಗೆ ಅವಕಾಶ ನೀಡಬೇಕೆಂದು ಪ್ರಧಾನಿ ಒಲಿಯವರನ್ನು ನೇಪಾಳ ಕಾಂಗ್ರೆಸ್ ಆಗ್ರಹಿಸಲಿದೆ. ಒಂದು ವೇಳೆ ಅವರು ರಾಜೀನಾಮೆ ನೀಡದೆ ಇದ್ದಲ್ಲಿ ಪ್ರತಿನಿಧಿ ಸಭಾದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಾನ್ ಸಿಂಗ್ ತಿಳಿಸಿದ್ದಾರೆ.