ಭಾರತದಿಂದ ಅಧಿಕ ತೆರಿಗೆ: ಅಮೆರಿಕ ವ್ಯಾಪಾರ ಪ್ರತಿನಿಧಿ ಆರೋಪ

Update: 2021-04-05 17:48 GMT

ವಾಶಿಂಗ್ಟನ್, ಎ. 5: ಭಾರತದ ವ್ಯಾಪಾರ ನೀತಿಗಳು ತಾರತಮ್ಯಕಾರಿಯಾಗಿದ್ದು, ತೆರಿಗೆ ಮತ್ತು ತೆರಿಗೆಯೇತರ- ಎರಡೂ ವಿಷಯಗಳಲ್ಲಿ ತಡೆಯೊಡುತ್ತವೆ ಹಾಗೂ ಭಾರತದೊಂದಿಗಿನ ರಫ್ತು ಮತ್ತು ಆಮದಿಗೆ ಬೆದರಿಕೆಯೊಡ್ಡುತ್ತವೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಕ್ಯಾಥರೀನ್ ಟಾಯ್ ತನ್ನ ಹೊಸ ವರದಿಯಲ್ಲಿ ಹೇಳಿದ್ದಾರೆ.

ಮಾರ್ಚ್ 31ರಂದು ಬಿಡುಗಡೆ ಮಾಡಿರುವ ವಿದೇಶಿ ವ್ಯಾಪಾರ ಅಡೆತಡೆಗಳಿಗೆ ಸಂಬಂಧಿಸಿದ ವರದಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರಕಾರಿ ಕಾನೂನುಗಳು, ನಿಯಂತ್ರಣಗಳು ಮತ್ತು ನೀತಿಗಳು ವ್ಯಾಪಾರ ತಡೆಗಳಲ್ಲಿ ಸೇರಿವೆ.

ಕಾರ್ಮಿಕ ಶ್ರಮವೇ ಪ್ರಧಾನವಾಗಿರುವ ಉತ್ಪನ್ನಗಳು ಹಾಗೂ ಸೆಲ್‌ಫೋನ್‌ಗಳು, ಟೆಲಿವಿಶನ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನೊಳಗೊಂಡ ಇಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ ಸಾಧನಗಳು- ಈ ಎರಡು ಬೃಹತ್ ಕ್ಷೇತ್ರಗಳಲ್ಲಿ ತೆರಿಗೆಗಳನ್ನು ಹೆಚ್ಚಿಸಲಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News