ಇನ್ನೂ 2 ಅವಧಿಗೆ ಸ್ಪರ್ಧಿಸಲು ಅವಕಾಶ ನೀಡುವ ಕಾನೂನಿಗೆ ಪುಟಿನ್ ಸಹಿ

Update: 2021-04-06 17:52 GMT

ಮಾಸ್ಕೋ (ರಶ್ಯ), ಎ. 6: ಇನ್ನೂ ತಲಾ ಆರು ವರ್ಷಗಳ ಎರಡು ಅವಧಿಗಳಿಗೆ ತನಗೆ ಅಧಿಕಾರದಲ್ಲಿರಲು ಅವಕಾಶ ನೀಡುವ ಮಸೂದೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಅಂತಿಮ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ, 2036ರವರೆಗೂ ಅಧಿಕಾರದಲ್ಲಿರುವ ಅವಕಾಶ ಅವರಿಗೆ ಲಭಿಸಿದೆ.

ಈಗಾಗಲೇ ಎರಡು ದಶಕಗಳಿಗೂ ಹೆಚ್ಚಿನ ಸಮಯದಿಂದ ಅಧಿಕಾರದಲ್ಲಿರುವ 68 ವರ್ಷದ ಪುಟಿನ್, ಸೋಮವಾರ ಮಸೂದೆಗೆ ಸಹಿ ಹಾಕಿದ್ದಾರೆ.

ಈ ಸಂಬಂಧ ತರಲಾದ ಸಂವಿಧಾನ ತಿದ್ದುಪಡಿಗೆ ಕಳೆದ ವರ್ಷದ ಜುಲೈನಲ್ಲಿ ನಡೆದ ಜನಮತಗಣನೆಯಲ್ಲಿ ರಶ್ಯನ್ನರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರು. ಅವರ ಪ್ರಸಕ್ತ ಅಧ್ಯಕ್ಷೀಯ ಅವಧಿ 2024ರಲ್ಲಿ ಮುಕ್ತಾಯಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News