×
Ad

ಹೂಡಿಕೆದಾರರಿಗೆ ವಂಚನೆ: ಹಾಲಿವುಡ್ ನಟ ಬಂಧನ

Update: 2021-04-07 23:49 IST

ಲಾಸ್ ಏಂಜಲಿಸ್ (ಅಮೆರಿಕ), ಎ. 7: ಹೂಡಿಕೆದಾರರಿಗೆ ಲಕ್ಷಾಂತರ ಡಾಲರ್ ವಂಚಿಸಿದ ಆರೋಪದಲ್ಲಿ ಅಮೆರಿಕದ ನಟ ಝ್ಯಾಕ್ ಏವರಿಯನ್ನು ಎಫ್‌ಬಿಐ ಮಂಗಳವಾರ ಬಂಧಿಸಿದೆ.

ತನ್ನ ಕಂಪೆನಿ ‘ವನ್-ಇನ್-ಎಂಎಂ ಕ್ಯಾಪಿಟಲ್’ ಚಿತ್ರ ವಿತರಣೆ ಹಕ್ಕುಗಳನ್ನು ಖರೀದಿಸುವುದು ಹಾಗೂ ಅವುಗಳನ್ನು ನೆಟ್‌ಫ್ಲಿಕ್ಸ್ ಮತ್ತು ಎಚ್‌ಬಿಒಗಳಲ್ಲಿ ಪ್ರಸಾರ ಮಾಡಲು ಪರವಾನಿಗೆ ನೀಡುವುದು ಎಂಬುದಾಗಿ ಏವರಿ ಹೂಡಿಕೆದಾರರಿಗೆ ತಿಳಿಸಿದ್ದರು. ಆದರೆ, ಅವರಿಗೆ ನೆಟ್‌ಫ್ಲಿಕ್ಸ್‌ನೊಂದಿಗಾಗಲಿ, ಎಚ್‌ಬಿಒನೊಂದಿಗಾಗಲಿ ಯಾವುದೇ ವ್ಯಾಪಾರ ಬಾಂಧವ್ಯ ಇರಲಿಲ್ಲ’’ ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಶನ್ ಹೇಳಿದೆ.

ಆದರೆ, 34 ವರ್ಷ ಪ್ರಾಯದ ನಟ, ಹೊಸ ಹೂಡಿಕೆದಾರರ ಹಣವನ್ನು ಹಳೆ ಹೂಡಿಕೆದಾರರಿಗೆ ನೀಡುತ್ತಾ ವಂಚನಾ ಕಂಪೆನಿಯನ್ನಾಗಿ ಮಾಡಿದರು ಎಂದು ಕ್ಯಾಲಿಫೋರ್ನಿಯ ಅಟಾರ್ನಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅವರ ಕಂಪೆನಿಯು 690 ಮಿಲಿಯ ಡಾಲರ್ (ಸುಮಾರು 5,132 ಕೋಟಿ ರೂಪಾಯಿ)ಗೂ ಹೆಚ್ಚಿನ ಹಣ ಸಂಗ್ರಹಿಸಿತ್ತು. 227 ಮಿಲಿಯ ಡಾಲರ್ (ಸುಮಾರು 1,636 ಕೋಟಿ ರೂಪಾಯಿ) ಹಣವನ್ನು ಅದು ಹೂಡಿಕೆದಾರರಿಗೆ ಹಿಂದಿರುಗಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News